ಹೊನ್ನಾಳಿ, ಜು. 11 – ತಾಲ್ಲೂಕಿನ ಹಿರೇಗೋಣಿಗೆರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಗೌರಮ್ಮ ಕೇಶೋಜಿರಾವ್, ಉಪಾಧ್ಯಕ್ಷರಾಗಿ ಹೆಚ್. ಮಂಜಪ್ಪ ಹೊಳೆಯಪ್ಪ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ತಿಳಿಸಿದರು.
ಅಧ್ಯಕ್ಷರಾಗಿದ್ದ ಸೊಮಪ್ಪ ಬುದ್ಯಪ್ಪರ್, ಉಪಾಧ್ಯಕ್ಷ ರಘು ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ಸಂಘದ ಸದಸ್ಯರಾದ ಹಿರೇಗೋಣಿಗೆರೆ ನಜೀರ್‍ಸಾಬ್, ಶಂಕರಪ್ಪ, ಜಿ. ಬಸವರಾಜಪ್ಪ, ಸೊಮಪ್ಪ ಬುದ್ಯಪರ್, ಹೆಚ್.ಎ. ಮಂಜಪ್ಪ, ಪ್ರಕಾಶರಾವ್, ರಘು, ಹೇಮಾವತಿ, ಹರಗನಹಳ್ಳಿ ಚಂದ್ರಪ್ಪ, ಕೆ.ಬಸವರಾಜ್, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ವಿಜಯ ಕುಮಾರ, ಸಂಘದ ಕಾರ್ಯನಿರ್ವಾಹಕ ಪ್ರಭು, ರಾಮಚಂದ್ರಪ್ಪ, ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸೋಮಪ್ಪ ಬಣಕಾರ್, ಮಾಜಿ ಅಧ್ಯಕ್ಷ ಹೆಚ್‍ವಿ ನಾಗರಾಜಪ್ಪ, ಗ್ರಾಮದ ಮುಖಂಡ ಹನುಮಂತಪ್ಪ, ಜಿವೈ ಸುಭಾಸ್, ವೀರಭಧ್ರಪ್ಪ, ಚಂದ್ರಪ್ಪ ಉಪಸ್ಥಿತರಿದ್ದರು.