ಲೋಕಾಯುಕ್ತರ ಬಲೆಗೆ ಹರಿಹರ ನಗರಸಭೆ ಆಯುಕ್ತ ಐಗೂರು ಬಸವರಾಜ್

ಲೋಕಾಯುಕ್ತರ ಬಲೆಗೆ ಹರಿಹರ  ನಗರಸಭೆ ಆಯುಕ್ತ ಐಗೂರು ಬಸವರಾಜ್

ಹರಿಹರ, ಜು. 8 – ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ವಾಟರ್ ಸಪ್ಲೈ ವಸ್ತುಗಳ ಸರಬರಾಜು ಮಾಡಿದ್ದ ದಾಸ್ತಾನು ಬಿಲ್ ಪಾವತಿ ಸಲು ಗುತ್ತಿಗೆದಾರರಿಂದ 2 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ನಗರದಲ್ಲಿಂದು ನಡೆದಿದೆ. 

ನಗರದ ಗುತ್ತಿಗೆದಾರ ಹಾಗೂ ಪ್ರಭು ಟ್ರೇಡರ್ಸ್ ಮಾಲೀಕ ಕರಿಬಸಪ್ಪ ಹಣಿಗಿಯವರು ನಗರಸಭೆಗೆ ವಾಟರ್ ಸಪ್ಲೈ ವಸ್ತುಗಳನ್ನು ಹಲವು ತಿಂಗಳಕೆಳಗೆ ಸರಬರಾಜು ಮಾಡಿದ್ದು, ಅದರ ಬಿಲ್ ಮೊತ್ತ  25 ರಿಂದ 30 ಲಕ್ಷ ರೂಪಾಯಿ ಹಣವನ್ನು ಮಂಜೂರು ಮಾಡುವಂತೆ ಪೌರಾಯುಕ್ತ ಐಗೂರು ಬಸವರಾಜ್ ಅವರಿಗೆ ಕೇಳಿದಾಗ ಅವರು 2 ಲಕ್ಷ ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. 

ಪೌರಾಯುಕ್ತ ಬಸವರಾಜ್ ಅವರ ಬೇಡಿಕೆ ಇಂದು ಕರಿಬಸಪ್ಪ ಹಣಿಗಿಯವರು 2 ಲಕ್ಷ ರೂ.ಗಳನ್ನು  ಶ್ರೀ ಹರಿಹರೇಶ್ವರ ಬಡಾವಣೆ ಯಲ್ಲಿರುವ ಪೌರಾಯುಕ್ತರ ಕೊಠಡಿ ಯಲ್ಲಿ ಕೊಡಲು ಹೋದ ಸಮಯದಲ್ಲಿ ದಾವ ಣಗೆರೆ ಲೋಕಾಯುಕ್ತ ಪೊಲೀಸ್ ಅಧಿಕಾರಿ ಎಂ.ಎಸ್. ಕೌಲಾ ಪೂರೆ ನೇತೃತ್ವದ ತಂಡವು ಪೌರಾಯುಕ್ತರನ್ನು ಹಣದ ಸಮೇತವಾಗಿ ಬಂಧಿಸಿ, ನಂತರ ನಗರ ಸಭೆಯ ಪೌರಾಯುಕ್ತ ಕಚೇ ರಿಗೆ ಕರೆತಂದು ದಾಖಲೆಗಳನ್ನು ಪರಿಶೀಲನೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಕಲಾವತಿ, ಪೊಲೀಸ್ ನಿರೀಕ್ಷಕ ಫ್ರಭು ಬಿ. ಸೂರಿನ್, ಸಿ. ಮಧುಸೂದನ್,  ಹೆಚ್. ಎಸ್. ರಾಷ್ಟ್ರಪತಿ, ಸಿ.ಹೆಚ್.ಸಿ. ಸಿಬ್ಬಂದಿಗಳಾದ ಆಂಜನೇಯ, ವೀರೇಶಯ್ಯ, ಸುಂದರೇಶ್, ಸಿ.ಪಿ.ಸಿ. ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಲಿಂಗೇಶ್, ಧನರಾಜ್, ಗಿರೀಶ್,  ಚಾಲಕ ಕೋಟಿನಾಯ್ಕ್, ಬಸವರಾಜ್, ಮೋಹನ್, ಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.

error: Content is protected !!