ದಾವಣಗೆರೆ, ಜು. 8 – ದಾವಣಗೆರೆ ತಾಲ್ಲೂಕು ಮಾಳಗೊಂಡನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಕೆ. ಪರಶುರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಸ್. ಮೂರ್ತಿ, ನಿರ್ದೇಶಕರಾಗಿ ಟಿ. ಅಂಜಿಬಾಬು, ಡಿ.ಎಂ. ರಾಕೇಶ್, ಎಂ.ಜಿ. ಮಂಜುನಾಥ್, ಹಾಲಾನಾಯ್ಕ್, ದೊಡ್ಡ ಮೈಲಾರಪ್ಪ, ಕೆ.ಪಿ. ನಾಗರಾಜ್, ರೂಪ, ಪದ್ಮಾವತಿ, ತಳವಾರ ರಾಮಪ್ಪ, ಕೆ.ಟಿ. ಹುಲುಗಪ್ಪ ಇವರು ನೇಮಕಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಸಿ.ಜಿ. ಜಗದೀಶ್ ತಿಳಿಸಿದ್ದಾರೆ.