ಹರಪನಹಳ್ಳಿ, ಜು. 7 – ಕಂಚಿಕೆರೆ ಗ್ರಾಮದ ಶ್ರೀ ಕೋಡಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 9 ರಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾಮಂಡಲ ಪೂಜೆ ನಡೆಯಲಿದೆ. ಶ್ರೀ ಕೋಡಿ ವೀರಭದ್ರೇಶ್ವರ ಸ್ವಾಮಿ ಸ್ಥಾಪಿತಗೊಂಡು 48 ದಿನಗಳು ಕಳೆದ ಹಿನ್ನೆಲೆಯಲ್ಲಿ ಈ ಮಹಾಮಂಡಲ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ, ಅಂದು ಬೆಳಗ್ಗೆ ಪ್ರಾತ ಕಾಲದಲ್ಲಿ ಲೋಕ ಕಲ್ಯಾಣಕ್ಕಾಗಿ ಮಳೆ-ಬೆಳೆ ಸಿದ್ಧಿಗಾಗಿ ವೀರಭದ್ರೇಶ್ವರ ಸ್ವಾಮಿಗೆ ಏಕಾದಶಿ ರುದ್ರಾಭಿಷೇಕ, 108 ಕುಂಭೋತ್ಸವದೊಂದಿಗೆ ಕುಂಭಾಭಿಷೇಕ ನಡೆಯಲಿದೆ.
ಕಂಚಿಕೆರೆಯ ಶ್ರೀ ಕೋಡಿ ವೀರಭದ್ರೇಶ್ವರ ಸ್ವಾಮಿಯ ಮಹಾಮಂಡಲ ಪೂಜೆ
