ಮಲೇಬೆನ್ನೂರಿನಲ್ಲಿ ಕನ್ನಡದ ರಥಯಾತ್ರೆಗೆ ಸ್ವಾಗತ

ಮಲೇಬೆನ್ನೂರಿನಲ್ಲಿ ಕನ್ನಡದ ರಥಯಾತ್ರೆಗೆ ಸ್ವಾಗತ

ಮಲೇಬೆನ್ನೂರು, ಜು. 7 – ಮೈಸೂರು ರಾಜ್ಯವು ಕರ್ನಾಟಕವೆಂದು  ನಾಮಕರಣವಾಗಿ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು `ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯವನ್ನೊಳ್ಳಗೊಂಡ ಕನ್ನಡ ರಥಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಚಾಲನೆ ನೀಡಿದೆ.

ರಥಯಾತ್ರೆಯು ಭಾನುವಾರ ಬೆಳಿಗ್ಗೆ ಮಲೇಬೆನ್ನೂರು ಪಟ್ಟಣಕ್ಕೆ ಆಗಮಿಸಿದಾಗ ಪುರಸಭೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡಾಭಿಮಾನಿಗಳು ಹಾಜರಿದ್ದು, ರಥಕ್ಕೆ ಪುಷ್ಪಾರ್ಚನೆ ಮತ್ತು ಭುವನೇಶ್ವರಿ ತಾಯಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿ, ನಂತರ ಹೊನ್ನಾಳಿಗೆ ಬಿಳ್ಕೊಟ್ಟರು. 

ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್‌ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್‌ ಪಟೇಲ್‌, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಪಿಎಸ್‌ಐ ಪ್ರಭು ಕೆಳಗಿನ ಮನಿ, ಪುರಸಭೆ ಸದಸ್ಯರಾದ ನಯಾಜ್‌, ಸಾಬೀ ರ್‌ಅಲಿ, ಷಾ ಅಬ್ರಾರ್‌, ಎ.ಆರೀಫ್‌ ಅಲಿ, ಎಕ್ಕೆಗೊಂದಿ ಕರಿಯಪ್ಪ, ಕೆ.ಪಿ. ಗಂಗಾಧರ್‌, ಭೋವಿ ಕುಮಾರ್‌, ಎ.ಕೆ. ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಚ ದಂಡಿ ತಿಪ್ಪೇಸ್ವಾಮಿ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್‌, ತಾ. ಕಸಾಪ ಸಂಘಟನಾ ಕಾರ್ಯದರ್ಶಿ ಹೆಚ್.ಎಂ. ಸದಾ ನಂದ್‌, ಹೋಬಳಿ ಕಾರ್ಯದರ್ಶಿ ಚಂದ್ರ ಶೇಖರ್‌, ಖಜಾಂಚಿ ಕುಂಬಳೂರು ವಾಸು, ಪ್ರಗತಿಪರ ಚಿಂತಕ ಸಿರಿಗೆರೆಯ ಕುಂದೂರು ಮಂಜಪ್ಪ, ಕರವೇ ಕಾರ್ಯಕರ್ತ ಬಟ್ಟೆ ಅಂಗಡಿ ವಿಶ್ವ, ವಾಸವಿ ರಮೇಶ್‌, ಮಲ್ಲಿಕಾರ್ಜುನ್‌ ಕಲಾಲ್‌ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!