ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗಿ ಸಂಭ್ರಮದಿಂದ ಮುನ್ನುಗ್ಗುತ್ತಿರುವ ಕನ್ನಡ ಚಲನಚಿತ್ರ ದೇಸಾಯಿ.
ಮಹಾಂತೇಶ್ ಚೊಳಚ ಗುಡ್ಡ ಬಾಗಲಕೋಟ್ ಅವರ ನಿರ್ದೇಶನ ದಲ್ಲಿ ಮೂಡಿಬಂದಿರುವ ಚಲನಚಿತ್ರ ದೇಸಾಯಿ. ಕನ್ನಡಿಗರು ನೋಡಲೇ ಬೇಕಾದ ಚಲನಚಿತ್ರ ವಾಗಿದೆ.
ಉತ್ತರ ಕರ್ನಾಟಕದ ದೇಸಾಯಿ ಮನೆತನದ ಸುತ್ತ ಎಣೆಯಲಾಗಿರುವ ಈ ಚಿತ್ರದ ಕಥೆ, ಆಲಮಟ್ಟಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಹೋದ ಭೂಮಿ, ಮನೆ-ಮಠ, ಆಸ್ತಿಪಾಸ್ತಿ ಹಾಗೂ ಬದುಕಿನ ಸುತ್ತಣದ ಕಥನವೇ ಇಡೀ ಸಿನಿಮಾದ ಕಥೆಯ ಜೀವದ್ರವ್ಯವಾಗಿದೆ.
ಈ ಚಿತ್ರದಲ್ಲಿ ನಗರ, ಹಳ್ಳಿಗಾಡಿನ ಜೀವನದ ನಡುವಿನ ಸಂಘರ್ಷವನ್ನು ಮತ್ತು ಶುದ್ಧ ಎಣ್ಣೆ ತೆಗೆಯುವ ಗಾಣಿಗ ಕುಟುಂಬದ ಬದುಕು, ಬವಣೆ, ಸ್ಥಿತಿಗತಿಗಳು ಅವಿಭಕ್ತ ಕುಟುಂಬದ ತಲ್ಲಣಗಳು, ರಾಗಾದ್ವೇಷಗಳಿಂದ ಸಿಡಿದು ಹೋದ, ಒಟ್ಟು ಕುಟುಂಬದ ಔಚಿತ್ಯತೆಗಳು, ಕುಟುಂಬದಲ್ಲಿ ಶಾಶ್ವತವಾಗಿ ಉಳಿಯಬೇಕಾದ ಸಂಬಂಧಗಳು ಬಗೆಗೆ ಸಿನಿಮಾದಲ್ಲಿ ಚೆನ್ನಾಗಿ ಮೂಡಿದೆ.
ಸಮಾಜಕ್ಕಾಗಿ ಅನೇಕ ಸನ್ನಿವೇಶ ಸಂಭಾಷಣೆಗಳ ಮೂಲಕ ಅತ್ಯುತ್ತಮವಾದ ಮೌಲ್ವಿಕವಾದ ಸಂದೇಶಗಳನ್ನು ಈ ಸಿನಿಮಾ ನೀಡಿದೆ. ಎಲ್ಲಾ ಪಾತ್ರಧಾರಿಗಳ ಮೂಲಕ ಉತ್ತರ ಕರ್ನಾಟಕದ ಭಾಷೆ, ಮತ್ತದರ ಸೊಗಸು ಹೃದಯಕ್ಕೆ ತಂಪೆರೆಯುತ್ತದೆ. ಹಾಡುಗಳು ಕ್ಲಾಸ್ ಗೂ ಸೈ ಮಾಸ್ ಗೂ ಸೈ ಎನ್ನುವಂತಿದೆ. ಸಂಭಾಷಣೆ ಔಚಿತ್ಯಪೂರ್ಣವಾಗಿದೆ.
ಪ್ರೀತಿ ಎಲ್ಲೆಲ್ಲೋ ಹುಟ್ಟುತದೆ ಎಂದು ಕೇಳಿದ್ದೇವೆ. ಆದರೆ, ನೀರಿನೊಳಗೆ ಪ್ರೇಮ ಹುಟ್ಟುತ್ತದೆ. ಹೇಗೆಂದು ತಿಳಿಯಬೇಕಾದರೆ ಸಿನಿಮಾ ನೋಡಲೇಬೇಕು.
ರಾಜ್ಯದ ಐತಿಹಾಸಿಕ ಪೈಟ್ಸ್ ಮತ್ತು ಸೌಂಡ್ಸ್ ಯಾವ ಬಾಲಿವುಡ್, ಟಾಲಿವುಡ್‌ಗಳಿ ಗಿಂತ ಕಮ್ಮಿಯಿಲ್ಲ. ಚಿತ್ರಕತೆಯನ್ನು ಸಿನಿಮಾ ಮಾಡುವಲ್ಲಿನ ಶ್ರದ್ಧೆ ಎದ್ದು ಕಾಣುತ್ತದೆ. ಒಟ್ಟು ಕುಟುಂಬದ ಬದುಕಿನ ಪ್ರಸ್ತುತತೆ ಹಾಗೂ ನಗರ ಮತ್ತದರ ಜೀವನದಲ್ಲಿನ ತಲ್ಲಣಗಳು ಹೇಗೆ ಸುಖಾಂತ್ಯವಾಗುತ್ತವೆ ಎನ್ನುವುದನ್ನು ಟಾಕೀಸ್‌ಗೆ ಬಂದು ನೋಡಿಯೇ ತಿಳಿಯಬೇಕು. ಸಿನಿಪ್ರಿಯರ ಕುತೂಹಲ ತಣಿಯಬೇಕಿದ್ದರೆ ಮತ್ತು ನಿರ್ಮಾಣ, ನಿರ್ದೇಶಕರ ಶ್ರಮ ಸಾರ್ಥಕ ಗೊಳಿಸಲು ಕನ್ನಡಿಗರು ದೇಸಾಯಿ ಸಿನಿಮಾ ನೋಡಬೇಕಿದೆ.
ಉತ್ತರ ಕರ್ನಾಟಕದ ಬಾದಾಮಿ, ಪಟ್ಟದಕಲ್ಲು, ಬಾಗಲಕೋಟೆ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದು, ನಾವು ನೋಡಿರುವ ಲೋಕೇಷನ್‌ಗಳಲ್ಲಿಯೇ ವಿಭಿನ್ನವಾಗಿ ಚಿತ್ರೀಕರಣ ಮಾಡಿ, ಸುಂದರವಾದ ದೃಶ್ಯಗಳು ಮನೋಹರವಾಗಿವೆ.
ಬಹುತೇಕ ನಟ – ನಟಿಯರು ಹೊಸಬರೇ ಆಗಿದ್ದರೂ ಎಲ್ಲರೂ ನಟನೆಯಲ್ಲಿ ಪ್ರಭುದ್ಧತೆ ಮೆರೆದಿದ್ದಾರೆ. ವೈದ್ಯಕಿಯ ಓದಿ ಡಾಕ್ಟರ್ ಕೂಡ ಆಗಿರುವ ಪ್ರವೀಣ್ ಅತ್ಯುತ್ತಮವಾಗಿ ಅಭಿಯಿಸಿದ್ದಾರೆ.
ಚಿತ್ರದ ನಾಯಕ ಮತ್ತು ನಾಯಕಿ ರಾಧ್ಯ ಜೋಡಿ ಚೆನ್ನಾಗಿ ಬಂದಿದೆ.
– ವಿರೂಪಾಕ್ಷಪ್ಪ ಪಂಡಿತ್, ದಾವಣಗೆರೆ. 9449412370