ಹರಪನಹಳ್ಳಿ, ಜು. 3 – ತಾಲ್ಲೂಕಿನ ತೆಲಿಗಿ ಗ್ರಾಮಕ್ಕೆ ತೆರಳುತ್ತಿದ್ದ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರು, ಅನಂತನಹಳ್ಳಿ ಬಳಿ ಇರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ಮಾಡುತ್ತಿದ್ದರು. ದಿಢೀರ್ ಭೇಟಿ ನೀಡಿದ ಶಾಸಕರು ಬಿಸಿ ಊಟವನ್ನು ಪರಿಶೀಲಿಸಿದರು.
ಮಕ್ಕಳೊಂದಿಗೆ ಶಾಸಕರು ನಾಲ್ಕೈದು ತುತ್ತು ಅನ್ನ ಮತ್ತು ಸಾಂಬಾರನ್ನು ಸೇವಿಸಿದರು. ಶುಚಿ-ರುಚಿಯಾಗಿದ್ದ ಬಿಸಿ ಊಟ ಸವಿದು ಅಡುಗೆ ಸಿಬ್ಬಂದಿ ಮತ್ತು ಮುಖ್ಯೋಪಾಧ್ಯಾಯರು ಹಾಗೂ ಸಕಲ ಸಿಬ್ಬಂದಿ ವರ್ಗದವರಿಗೆ ಅಭಿನಂದಿಸಿದರು.
ಇನ್ನೂ ಉತ್ತಮವಾದ ಅಡುಗೆ ಮಾಡಲು ಸೂಚಿಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯ ಫಲಿತಾಂಶ 100ಕ್ಕೆ 100 ರಷ್ಟು ಮಾಡಲು ಕ್ರಮ ವಹಿಸಬೇಕೆಂದು ತಿಳಿಸಿದರು.
ಈ ವೇಳೆ ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಎಂ.ವಿ. ಅಂಜಿನಪ್ಪ. ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಪೈಲ್ವಾನ್ ಗಣೇಶ, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಎಚ್.ಕೆ.ಚಂದ್ರಪ್ಪ ಸೇರಿದಂತೆ ಇತರರು ಇದ್ದರು.