ದಾವಣಗೆರೆ, ಜು. 2 – ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಮತ್ತು ಜರವೇ ಯಿಂದ ಅದ್ದೂರಿಯಾಗಿ ನಡೆಸಲಾಗಿದ್ದ ಗೋಲ್ಡನ್ ಕೆಪಿಎಲ್ -6 ಪಂದ್ಯಾವಳಿಗೆ ತೆರೆ ಬಿದ್ದಿದ್ದು, ಡ್ರಾನಲ್ಲಿ ಅಂತ್ಯಗೊಂಡಿತು.
ಕೊನೆ ಎಸೆತದ ತನಕ ಎರಡು ತಂಡಗಳು ಗೆಲುವಿಗಾಗಿ ಭಾರೀ ಪೈಪೋಟಿ ನಡೆಸಿದ್ದವು, ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಕುಂದುವಾಡ ಯೋಧಾಸ್ ಹಾಗೂ ಅಪ್ಪು ಪವರ್ ಫೈಟರ್ಸ್ ತಂಡಗಳಿಗೆ ಸಮಬಲ ಪ್ರಶಸ್ತಿ ಎಂದು ಘೋಷಣೆ ಮಾಡಿ ಪ್ರಶಸ್ತಿ ವಿತರಿಸಲಾಯಿತು.
ನಗರದ ಹಳೇ ಕುಂದುವಾಡ ಶಿಬಾರದಲ್ಲಿಂದು ಕುಂದುವಾಡ ಯೋಧಾಸ್ ತಂಡದ ಫ್ರಾಂಚೈಸಿ ಕೆ.ಎನ್. ಲಿಂಗರಾಜ್ ಹಾಗೂ ಅಪ್ಪು ಫೈಟರ್ಸ್ ತಂಡದ ಫ್ರಾಂಚೈಸಿ ಸೋಮು ಅಕ್ಕಿ ಅವರುಗಳಿಗೆ ಸನ್ಮಾನಿಸಿ, ಗೌರವಿಸಿ, ಬಂಗಾರದ ಕಪ್ಪನ್ನು ಇಬ್ಬರಿಗೂ ವಿತರಣೆ ಮಾಡಲಾಯಿತು. ತೃತೀಯ ಬಹುಮಾನವನ್ನು ಜೆಕೆ ಕ್ರಿಕೆಟರ್ಸ್ ಗೆ ವಿತರಣೆ ಮಾಡಲಾಯಿತು.
ಟೂರ್ನಿಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಬಂಗಾರದ ಕಪ್ಪನ್ನು ಪ್ರಥಮ ಬಹುಮಾನವಾಗಿಸಿ ಅದ್ಧೂರಿಯಾಗಿ ಟೂರ್ನಿ ನಡೆಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಮಧುನಾಗರಾಜ್ ಕುಂದುವಾಡ, ಪ್ರಧಾನ ಕಾರ್ಯದರ್ಶಿ ರಾಜು ಕರೂರು, ಖಜಾಂಚಿ ನಾಗರಾಜ್ ಎಸ್ ಬಿ ಕೆಪಿಎಲ್ ಕ್ರಿಕೆಟ್ ಉಸ್ತುವಾರಿಗಳಾದ ರಮೇಶ್ ಯರಿಯಪ್ಪರ, ಸಂತೋಷ್ ಟೋನಿ, ಶಿವರಾಜ್ ಯರಿಯಪ್ಪರ, ಗಣೇಶ್ ಕುರುಮನಹಳ್ಳಿ, ಬೀರೇಶ್, ಬೆಳಕೇರಪ್ಪ, ಜಯರಾಮ್, ಕಾಳಾಚಾರಿ, ತರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.