ದಾವಣಗೆರೆ, ಜೂ.28- ಎಂ.ಸಿ. ಕಾಲೋನಿಯಲ್ಲಿ ನಾಗರಿಕರ ಹಿತರಕ್ಷ ಣಾ ಸಮಿತಿಯಿಂದ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರನ್ನು ನಿನ್ನೆ ಭೇಟಿ ಮಾಡಿ 2024-25 ನೇ ಸಾಲಿನ ಮನೆ ಕಂದಾಯ ಹೆಚ್ಚ ಳದ ಕುರಿತು ಮತ್ತು ಈ ಭಾಗದ ನಾಗರಿ ಕ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಯಿತು.
ಎಂ.ಸಿ. ಕಾಲೋನಿಯಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಂದನೂರು ಮುಪ್ಪಣ್ಣ, ಕಾರ್ಯದರ್ಶಿ ವಸಂತ ಶಾಮನೂರು, ಪದಾಧಿಕಾರಿ ಗಳಾದ ಬಿ.ಹೆಚ್. ಪರಶುರಾಮಪ್ಪ, ಎಸ್.ಸಿ. ಹುಲ್ಲತ್ತಿ, ಹಾಲಪ್ಪ, ನಾಗಭೂಷಣ ಕಡೇಕೊಪ್ಪ ಮತ್ತಿತರರು ಆಯುಕ್ತರನ್ನು ಭೇಟಿ ಮಾಡಿದ್ದರು.