ದಾವಣಗೆರೆ, ಜೂ.28- ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಗರದ ಹಿರಿಯ ನ್ಯಾಯವಾದಿ ಎನ್. ಜಯದೇವ ನಾಯಕ ಅವರು ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಯವರಿಂದ ಆಶೀರ್ವಾದ ಪಡೆದರು.
ಜಯದೇವ ನಾಯಕ ಅವರು ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ಸಕ್ರಿಯ ಕಾರ್ಯಕರ್ತರಾಗಿ ದುಡಿದ ಫಲಕ್ಕೆ ಸರ್ಕಾರ ನೀಡಿರುವ ಸ್ಥಾನಮಾನಕ್ಕೆ ಸಂತಸ ವ್ಯಕ್ತಪಡಿಸಿದ ಜಗದ್ಗುರುಗಳು, ಬಡ ಲಂಬಾಣಿ ಜನಾಂಗದ ಸರ್ವತೋಮುಖ ಏಳಿಗೆಗೆ ಶ್ರಮಿಸುವಂತೆ ಜಯದೇವ ನಾಯಕ ಅವರಿಗೆ ಕಿವಿಮಾತು ಹೇಳಿದರು.