ಹರಿಹರಕ್ಕೆ ಇಂದು ರಾಜ್ಯಪಾಲರು ಸ್ಥಳ ಪರಿಶೀಲಿಸಿದ ಎಸ್ಪಿ

ಹರಿಹರಕ್ಕೆ ಇಂದು ರಾಜ್ಯಪಾಲರು ಸ್ಥಳ ಪರಿಶೀಲಿಸಿದ ಎಸ್ಪಿ

ಹರಿಹರ, ಜೂ.24- ನಗರದ ಸೇಂಟ್ ಅಲೋಶಿಯಸ್ ಕಾಲೇಜಿ ನಲ್ಲಿ ನೂತನವಾಗಿ ಅರಂಭಿಸಿರುವ ಸೇಂಟ್ ಅಲೋಶಿಯಸ್ ಇಂಟರ್ ನ್ಯಾಷನಲ್ ಸ್ಕೂಲ್ ಉದ್ಘಾಟನೆ ಹಾಗೂ ಸಂತ ಅಲೋಶಿಯಸ್ ಗೊಂಜಾಗ ಅವರ 457 ಜಯಂತಿ ಸಮಾರಂಭ ನಾಳೆ ಮಂಗಳವಾರ ನಡೆಯಲಿದ್ದು, ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮಾರಂಭದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಆಡಿಷನಲ್ ಎಸ್ಪಿ ವಿಜಯಕುಮಾರ್ ಸಂತೋಷ್, ಡಿವೈಎಸ್ಪಿ ಜಿ‌.ಎಸ್. ಬಸವರಾಜ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಹಾವೇರಿ,  ಸಿಪಿಐ ಗಳಾದ ಸುರೇಶ್ ಸಗರಗಿ, ದೇವಾನಂದ್, ಸುನಿಲ್ ಹುಲ್ಮನಿ, ಮಂಜುನಾಥ್ ಹಲವಾಗಲ, ಪಿಎಸ್ಐ ಗಳಾದ ಮಂಜುನಾಥ್ ಕುಪ್ಪೇಲೂರು, ಪ್ರಭು ಕೆಳಗಿನ ಮನೆ ಕಾಲೇಜು ಪ್ರಾಂಶುಪಾಲರು ಇತರರು ಇದ್ದರು.

error: Content is protected !!