ಚನ್ನಗಿರಿ, ಜೂ.24- ತ್ಯಾವಣಿ ಗಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ವಿ.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಮಾನವನ ದುರಾಸೆಯಿಂದಾಗಿ ಪರಿಸರದಲ್ಲಿ ವೈಪರೀತ್ಯ ಸಂಭವಿ ಸುತ್ತಿದೆ. ಆದ್ದರಿಂದ ಪರಿಸರ ರಕ್ಷಣೆಗಾಗಿ ಮರಗಳನ್ನು ಕಡ್ಡಾಯವಾಗಿ ನೆಡುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಪರಿಸರ ನಾಶದ ದುಷ್ಪರಿಣಾಮ ಹಾಗೂ ವಿಶ್ವ ಪರಿಸರ ದಿನಾಚರಣೆಯ ಗುರಿ ಮತ್ತು ಉದ್ದೇಶದ ಬಗ್ಗೆ ಉಪನ್ಯಾಸಕ ಮಹಾಂತೇಶ್ ಬಿ. ನಿಟ್ಟೂರು ಮಾಹಿತಿ ನೀಡಿದರು.
September 14, 2024