ಹರಿಹರದಲ್ಲಿ ಮಕ್ಕಳಿಗೆ ಯೋಗ ತರಬೇತಿ : ಆಯುಷ್ ಪರಿಚಯ

ಹರಿಹರದಲ್ಲಿ ಮಕ್ಕಳಿಗೆ ಯೋಗ ತರಬೇತಿ : ಆಯುಷ್ ಪರಿಚಯ

ಹರಿಹರ,  ಜೂ. 13- ಜಿಲ್ಲಾಡಳಿತ,  ಜಿಲ್ಲಾ  ಆಯುಷ್ ಇಲಾಖೆ ಹಾಗೂ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಹರಿಹರ ಸ್ಥಳೀಯ ಸಂಸ್ಥೆ ಸಹಯೋಗದೊಂದಿಗೆ ಇಲ್ಲಿನ ಸೇಂಟ್ ಮೇರಿಸ್ ಶಾಲೆಯ ಆವರಣದಲ್ಲಿ  ಸುಮಾರು 1700 ಮಕ್ಕಳಿಗೆ  ಯೋಗ ತರಬೇತಿ ಮತ್ತು ಆಯುಷ್ ಪದ್ಧತಿಯ ಬಗ್ಗೆ ಪರಿಚಯ  ನೀಡಲಾಯಿತು. 

ಕಾರ್ಯಕ್ರಮದಲ್ಲಿ  ಜಿಲ್ಲಾ ಆಯುಷ್ ಅಧಿಕಾರಿ  ಡಾ. ಬಿ.ಯು.ಯೋಗೇಂದ್ರಕುಮಾರ್  ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಪ ಮುಖ್ಯ ವೈದ್ಯಾಧಿಕಾರಿ,  ಹರಿಹರ ತಾಲ್ಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆಯ  ಡಾ. ಎಸ್.ಎಸ್ ಸುಚಿತ್ರ   ಅವರು ವಿದ್ಯಾರ್ಥಿಗಳಿಗೆ ಜಂಕ್ ಫುಡ್‌ನಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಬನ್ನಿಕೊಡು ಹಿರಿಯ ವೈದ್ಯಾಧಿಕಾರಿ  ಡಾ. ಎಂ.ಸಿ ಸುರೇಶ್ ಕುಮಾರ್   ಇವರು ದಿನನಿತ್ಯ ಯೋಗ ಮಾಡುವುದರ ಪ್ರಯೋಜನಗಳನ್ನು ತಿಳಿಸಿದರು.  ಯೋಗ ತರಬೇತುದಾರ  ಆನಂದ್  ವಿದ್ಯಾರ್ಥಿಗಳಿಗೆ  ಯೋಗ  ಮಾಡಿಸಿ, ಅದರ ಲಾಭಗಳನ್ನು ತಿಳಿಸಿದರು. 

ಜ್ಞಾನಪ್ರಕಾಶ್, ಮೋಹನ್ ಮತ್ತು  ರಾಜು ಕಾರ್ಯಕ್ರಮ ಅಯೋಜಿಸಿದ್ದರು. 

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹಾಯಕ ಜಿಲ್ಲಾ ಆಯುಕ್ತ ಎನ್.ಕೆ.ಕೊಟ್ರೇಶ್ ಮತ್ತು  ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಭಾಕರ್ ಮತ್ತು ಎಸ್. ಜಿ. ವಿ ಅಶ್ವಿನಿ  ಹಾಗೂ ಸಿಸ್ಟರ್ ಶೀಲಾಕುಮಾರಿ, ಸಿಸ್ಟರ್ ಮಾರ್ಟಿನಲ್, ಸಿಸ್ಟರ್ ಮೇರಿ ಕ್ರಿಸ್ಟಿನ್. ಸಿಸ್ಟರ್ ಮೆರಿಲ್ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಗೈಡ್ ಕ್ಯಾಪ್ಟನ್ ಫಿಲೋಮಿನಾ , ರಂಜಿತ ಜ್ಯೋತಿ ಉಪಸ್ಥಿತರಿದ್ದರು.

error: Content is protected !!