ದಾನ ಮಾಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕರೆ

ದಾನ ಮಾಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕರೆ

ರಾಣೇಬೆನ್ನೂರು, ಜೂ. 13 – ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ನಿಮ್ಮ ಗಳಿಕೆಯಲ್ಲಿ ಸ್ವಲ್ಪನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿದರೆ ಅದರ ಪುಣ್ಯ ತಮಗೆ ಪ್ರಾಪ್ತಿಯಾಗಲಿದೆ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ನುಡಿದರು.

ದೊಡ್ಡಪೇಟೆ ಪಂಚಾಚಾರ್ಯ ಮಂಗಲ ಮಂದಿರದಲ್ಲಿ ನಡೆದ ವೀರಶೈವ ನೌಕರರ ಹಾಗೂ ವಧು-ವರರ ವೇದಿಕೆ ಏರ್ಪಡಿಸಿದ್ದ ಕಲಿಕಾ ಸಾಮಗ್ರಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಉಪದೇಶಿಸುತ್ತಿದ್ದರು.

ಧಾನ, ತ್ಯಾಗ ಮತ್ತು ಪ್ರತಿಭಾ ವಂತರ ಗುರುತಿಸುವಿಕೆಯು ಸಮಾ ಜದ ಏಳಿಗೆಗೆ ಪೂರಕವಾಗಿರುತ್ತದೆ ಎಂದು ಸಾನ್ನಿಧ್ಯ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಉಪದೇಶಿಸಿ ದರು. ಸಮಾ ಜದ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ನಗರ ಸಭೆಗೆ ನಾಮಕರಣಗೊಂಡ ಸದಸ್ಯ ವೀರೇಶ ಬಾಳಿಹಳ್ಳಿಮಠ ಅವರನ್ನು ಗೌರವಿಸಲಾಯಿತು.

ಎಸ್. ಸಿ.  ಷಡಾಕ್ಷರಿಮಠ, ವಿ. ಜಿ. ನೀರಲಗಿ ಮಠ, ಬಿ.ಎಚ್. ಉಮ್ಮನಗೌಡ್ರ, ರಾಜು ಹರವಿಶೆಟ್ರು, ಎಫ್.ಎ. ಭಸ್ಮಾಂಗಿಮಠ, ಎಂ.ಕೆ.ಸಾಲಿಮಠ, ರಾಜಶೇಖರ ಸಾಲಿಮಠ ಮತ್ತು ರಾಜಶೇಖರ  ಬೆಳವಗಿಮಠ ಮತ್ತಿತರರಿದ್ದರು.

error: Content is protected !!