ನೀಟ್ : ವಿಶ್ವಚೇತನ ವಿದ್ಯಾನಿಕೇತನ, ವಿದ್ಯಾಚೇತನ ವಸತಿಯುತ ಕಾಲೇಜುಗಳಿಗೆ ಉತ್ತಮ ಫಲಿತಾಂಶ

ನೀಟ್ : ವಿಶ್ವಚೇತನ ವಿದ್ಯಾನಿಕೇತನ, ವಿದ್ಯಾಚೇತನ ವಸತಿಯುತ ಕಾಲೇಜುಗಳಿಗೆ ಉತ್ತಮ ಫಲಿತಾಂಶ

ದಾವಣಗೆರೆ, ಜೂ.6- ನಗರದ ವಿಶ್ವಚೇತನ ವಿದ್ಯಾನಿಕೇತನ / ವಿದ್ಯಾಚೇತನ ವಸತಿಯುತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಎಸ್.ಎನ್.ರಾಹುಲ್ ಅವರು, ರಾಷ್ಟ್ರ ಮಟ್ಟದ ವೈದ್ಯಕೀಯ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ನೀಟ್ – 2024 ಪರೀಕ್ಷೆಯಲ್ಲಿ 720 ಕ್ಕೆ 695 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಹೆಚ್.ಎನ್ ನವೀನ್ 720ಕ್ಕೆ 685 ದ್ವಿತೀಯ ಸ್ಥಾನ, ಎಮ್.ಎಸ್. ಧನುಷ್ 720 ಕ್ಕೆ 665 ತೃತೀಯ ಸ್ಥಾನವನ್ನು ಪಡೆದಿದ್ದಾರೆ. 

ಎಸ್.ಮಮತ : 646, ಸಿ.ಎಸ್.ಸೃಜನ್ : 643, ಎಸ್.ಸೂರ್ಯ : 640, ಎಸ್.ಸೃಜನ್ : 630, ಜಿ.ಎಸ್.ಮನೋಹರಿ : 626, ಆರ್.ಕಾರ್ತಿಕ್ : 623, ಪಿ.ಆಕಾಶ್ : 617, ವಿ.ಪ್ರೇರಣ : 616, ಜಾಕೀರ್ ಹುಸೇನ್ : 608, ತನ್ಮಯಿ ವಿ.ಕೊಟ್ಟುರು : 602 ಹಾಗೆಯೇ ಇನ್ನೂ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವು ಕೂಡ ನಮ್ಮ ಕಾಲೇಜಿನ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿ ಶಿಕ್ಷಣಕ್ಕೆ ಆಯ್ಕೆಯಾಗಿದ್ದು, ವಿಶೇಷವೆಂದರೆ ಈ ಎಲ್ಲಾ ವಿದ್ಯಾರ್ಥಿಗಳು ಲಾಂಗ್ ಟರ್ಮ್ ಕೋಚಿಂಗ್ ಇಲ್ಲದೇ ತಮ್ಮ ಪ್ರಥಮ ಪ್ರಯತ್ನದಲ್ಲೇ ವೈದ್ಯಕೀಯ ಸೀಟು ಪಡೆದಿರುವುದು ಪ್ರಶಂಸೆಯ ವಿಷಯವಾಗಿದೆ. 

ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮೀ ವೀರಮಾಚನೇನಿ, ಪ್ರಾಂಶುಪಾಲ ಜಿ.ವಿನೋದ್ ಮತ್ತಿತರರು ಅಭಿನಂದಿಸಿದ್ದಾರೆ.

error: Content is protected !!