ವಿಶ್ವದ 71 ಸ್ಥಳಗಳಲ್ಲಿ ಪ್ರತಿದಿನ 51,000 ಪೌಷ್ಟಿಕ ಆಹಾರ ಪೊಟ್ಟಣಗಳ ವಿತರಣೆ
ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿಶ್ವದ 71 ಸ್ಥಳಗಳಲ್ಲಿ 51,000 ಜನರಿಗೆ ಪ್ರತಿದಿನ ಊಟವನ್ನು ನೀಡಲಿದ್ದು, ವಾರ್ಷಿಕ 18.6 ಮಿಲಿಯನ್ ಊಟವನ್ನು ವಿತರಣೆ ಮಾಡಲಿದೆ. ಪ್ರಸ್ತುತ ಸಂಸ್ಥೆಯು ಭಾರತದ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 16 ರಾಜ್ಯಗಳ 37 ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದಲ್ಲದೇ, ಗಲ್ಫ್ ದೇಶಗಳಲ್ಲಿಯೂ ಕೆಲವು ಕೇಂದ್ರಗಳ ಮೂಲಕ ಆಹಾರ ಪೂರೈಕೆ ಮಾಡುತ್ತಿದೆ.
ಯೋಜನೆಯ ವಿಸ್ತರಣೆ ಭಾಗವಾಗಿ ಇದೀಗ 16 ರಾಜ್ಯಗಳ 70 ಕ್ಕೂ ಹೆಚ್ಚು ನಗರಗಳಲ್ಲಿ ಅಗತ್ಯವಿರುವ ವ್ಯಕ್ತಿಗಳಿಗೆ ಪೌಷ್ಟಿಕ ಆಹಾರವನ್ನು ವಿತರಣೆ ಮಾಡಲಿದೆ. ಈ ಯೋಜನೆಯಲ್ಲದೇ, ಗ್ರೂಪ್ ವಿಶ್ವದಲ್ಲಿ ಅತಿ ದೊಡ್ಡ ಮಟ್ಟದ ಚಿನ್ನದ ಗಣಿ ಇರುವ ಆಫ್ರಿಕಾದ ಝಾಂಬಿಯಾದಲ್ಲಿ ಶಾಲಾ ಮಕ್ಕಳಿಗೆ ಇದೇ ಯೋಜನೆಯನ್ನು ಜಾರಿಗೊಳಿಸುವ ಯೋಜನೆ ರೂಪಿಸಿದೆ.
–ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್
ದಾವಣಗೆರೆಯಲ್ಲಿ ಎಸ್ಸೆಸ್ ಅಧ್ಯಕ್ಷತೆಯಲ್ಲಿ ಹಸಿರು ನಿಶಾನೆ
`ವಿಶ್ವ ಹಸಿವು ಮುಕ್ತ ದಿನ’ದ ದಾವಣಗೆೆರೆಯ ಕಾರ್ಯಕ್ರಮದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಡಾ. ಪುಷ್ಪಲತಾ, ಪವಿತ್ರರಾಜ್ ಸೋಶಿಯಲ್ ವರ್ಕ್ ಮತ್ತು ಬಿ.ಹೆಚ್. ಮುನಿಯಪ್ಪ ಅವರು ವಿಸ್ತರಣಾ ಯೋಜನೆಗೆ ಹಸಿರು ನಿಶಾನೆ ತೋರಿದರು.
ದಾವಣಗೆರೆ, ಮೇ 28- ಪೌಷ್ಟಿಕ ಆಹಾರದ ಅಗತ್ಯವಿರುವ ನಿರ್ಗತಿಕರಿಗೆ ಪ್ರತಿದಿನ ಊಟವನ್ನು ಪೂರೈಕೆ ಮಾಡುವ ಮಲಬಾರ್ ಗ್ರೂಪ್‍ನ `ಹಸಿವು ಮುಕ್ತ ಜಗತ್ತು’ ನಿರ್ಮಾಣದ ಸಿಎಸ್‍ಆರ್ ಕಾರ್ಯಕ್ರಮವನ್ನು ಇನ್ನಷ್ಟು ಸ್ಥಳಗಳಿಗೆ ಮತ್ತು ವ್ಯಕ್ತಿಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಡಿ ಪ್ರತಿದಿನ 31,000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 2 – ಶೂನ್ಯ ಹಸಿವು ಕಾರ್ಯಕ್ರಮಕ್ಕೆ ನೆರವಾಗುವ ನಿಟ್ಟಿನಲ್ಲಿ ಮಲಬಾರ್ ಗ್ರೂಪ್ ಈ ಉಪಕ್ರಮವನ್ನು ಜಾರಿಗೆ ತಂದಿದೆ. ಇದರ ವಿಸ್ತರಣೆ ಭಾಗವಾಗಿ ಇನ್ನು ಮುಂದೆ ಪ್ರತಿದಿನ 51,000 ಪೌಷ್ಟಿಕ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತದೆ.
ನಗರದ ಮಂಡಿಪೇಟೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನಲ್ಲಿ ಇಂದು ಆಯೋಜಿಸಿದ್ದ `ವಿಶ್ವ ಹಸಿವು ಮುಕ್ತ ದಿನ’ದ ಕಾರ್ಯಕ್ರಮದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಡಾ. ಪುಷ್ಪಲತಾ, ಪವಿತ್ರರಾಜ್ ಸೋಶಿಯಲ್ ವರ್ಕ್ ಮತ್ತು ಬಿ.ಹೆಚ್. ಮುನಿಯಪ್ಪ ಅವರು ಈ ವಿಸ್ತರಣಾ ಯೋಜನೆಗೆ ಹಸಿರು ನಿಶಾನೆ ತೋರಿದರು. ಸಂಸ್ಥೆಯ ಮುಖ್ಯಸ್ಥ ಬಾಸಿಲ್ ರಾಜನ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿಶೇಷವಾಗಿ ಬೀದಿ ಬದಿಯಲ್ಲಿ ವಾಸ ಮಾಡುವವರು ಸೇರಿದಂತೆ ಆಹಾರದ ಅಗತ್ಯವಿರುವವರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಧ್ಯೇಯವಾಗಿದೆ.
ನಮ್ಮ ಸಿಎಸ್‍ಆರ್ ಚಟುವಟಿಕೆಗಳು ಕರ್ನಾಟಕದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಿವೆ. ಹಸಿವು ಮುಕ್ತ ಜಗತ್ತು ಯೋಜನೆಯನ್ನು ಕರ್ನಾಟಕದಲ್ಲಿ 2023 ರಲ್ಲಿ ಆರಂಭಿಸಲಾಯಿತು. ನಾವು 4,450 ಜನರಿಗೆ ಪ್ರತಿದಿನ ಒಂದು ಹೊತ್ತಿನ ಊಟ ನೀಡುತ್ತಿದ್ದೆವು. ಇನ್ನು ಮುಂದೆ 7,167 ಜನರಿಗೆ ಪ್ರತಿದಿನ ಊಟವನ್ನು ನೀಡಲಿದ್ದೇವೆ. ಈ ಮೂಲಕ ಕರ್ನಾಟಕದ 12 ಸ್ಥಳಗಳಲ್ಲಿ ವಾರ್ಷಿಕ 26,15,955 ಊಟವನ್ನು ನೀಡಲಿದ್ದೇವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಪಿ.ಅಹ್ಮದ್ ಅವರು, `ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಲೂ ಒಂದು ಹೊತ್ತಿನ ಊಟಕ್ಕಾಗಿ ಪರದಾಟ ನಡೆಸುತ್ತಿರುವ ಇನ್ನೂ ಅನೇಕ ಜನರು ನಮ್ಮ ಸುತ್ತಮುತ್ತ ಇನ್ನೂ ಇದ್ದಾರೆ. ನಮ್ಮ ಜಗತ್ತಿನಲ್ಲಿ ಹಸಿವು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಠಿಣ ಕೆಲಸ ಮಾಡುತ್ತಿರುವ ಸರ್ಕಾರಗಳು ಮತ್ತು ಏಜೆನ್ಸಿಗಳಿಗೆ ನೆರವಾಗುವ ನಿಟ್ಟಿನಲ್ಲಿ ನಾವು ಕಿರು ಕಾಣಿಕೆಯನ್ನು ಸಲ್ಲಿಸುತ್ತಿದ್ದೇವೆ’ ಎಂದರು.
ಹಸಿವು ಮುಕ್ತ ಜಗತ್ತು ಕಾರ್ಯಕ್ರಮವನ್ನು ಅತ್ಯಂತ ಮಾನ್ಯತೆ ಹೊಂದಿರುವ ಸಾಮಾಜಿಕ ಕಲ್ಯಾಣ ಸಂಸ್ಥೆಯಾಗಿರುವ ಎನ್‍ಜಿಒ `ಥನಾಲ್ ದಯಾ ರಿಹೆಬಿಲಿಟೇಶನ್ ಟ್ರಸ್ಟ್’ ನೆರವಿನಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ನುರಿತ ಬಾಣಸಿಗರಿಂದ ವಿವಿಧ ಅತ್ಯಂತ ನೈರ್ಮಲ್ಯ ಪರಿಸರದಲ್ಲಿ ಸ್ಥಾಪಿಸಲಾಗಿರುವ ಆಧುನಿಕ ಅಡುಗೆ ಕೋಣೆಗಳಲ್ಲಿ ಪೌಷ್ಟಿಕ ಆಹಾರವನ್ನು ತಯಾರಿಸಲಾಗುತ್ತಿದೆ. ಮಲಬಾರ್ ಗ್ರೂಪ್ ಮತ್ತು ಥನಾಲ್‍ನ ಸ್ವಯಂ ಸೇವಕರು ಬೀದಿಬದಿ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಅವರಿದ್ದಲ್ಲಿಗೇ ಆಹಾರವನ್ನು ತಲುಪಿಸುತ್ತಿದ್ದಾರೆ.
ಎನ್‍ಜಿಒ ಸ್ವಯಂ ಸೇವಕರು ಹಸಿವಿಗೆ ಕಾರಣವಾಗಿರುವ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳನ್ನು ನಿರ್ಣಯ ಮಾಡಿ, ಫಲಾನುಭವಿಗಳನ್ನು ಸಮೀಕ್ಷೆ ಮಾಡುತ್ತಾರೆ. ಈ ಕಾರ್ಯಕ್ರಮದ ಭಾಗವಾಗಿ ಮಲಬಾರ್ ಗ್ರೂಪ್ ಥನಾಲ್ ಸಹಯೋಗದೊಂದಿಗೆ ಬಡ ಮತ್ತು ಅನಾಥ ವೃದ್ಧ ಮಹಿಳೆಯರನ್ನು ಗುರುತಿಸಿ, ಅವರಿಗೆ ಉಚಿತ ಆಹಾರ, ವಸತಿ ಮತ್ತು ಇತರೆ ಆರೋಗ್ಯ ಸೇವೆಗಳನ್ನು ಒದಗಿಸುವ `ಅಜ್ಜಿ ಮನೆ’ ಯೋಜನೆಯನ್ನು ಈಗಾಗಲೇ ಆರಂಭಿಸಿದೆ. ಇಂತಹ ಎರಡು ಅಜ್ಜಿ ಮನೆಗಳನ್ನು ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳಲ್ಲಿ ಸ್ಥಾಪಿಸಲಾಗಿದೆ.
ಚೆನ್ನೈ, ದೆಹಲಿ, ಕೋಲ್ಕೊತ್ತಾ, ಮುಂಬೈ ಮತ್ತು ಕೇರಳದ ಕೆಲವು ಆಯ್ದ ನಗರಗಳಲ್ಲಿ ಇದೇ ರೀತಿಯ ಮನೆಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ನಿರ್ಲಕ್ಷಿತ ಮತ್ತು ಅನಾಥ ಮಹಿಳೆಯರಿಗೆ ಗೌರವಯುತವಾದ ಬದುಕು ಸಾಗಿಸಲು ಅವಕಾಶ ದೊರೆಯಲಿದೆ. ಬೀದಿ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ಬೆಂಬಲಿಸುವ ನಿಟ್ಟಿನಲ್ಲಿ ಗ್ರೂಪ್ ಮೈಕ್ರೋ ಲರ್ನಿಂಗ್ ಕಾರ್ಯಕ್ರಮವನ್ನೂ ಸಹ ಆರಂಭಿಸಿದೆ. ಇದರ ಹೊರತಾಗಿ, ಮಲಬಾರ್ ಗ್ರೂಪ್ ಇನ್ನಿತರೆ ಸಾಮಾಜಿಕ ಕಲ್ಯಾಣ ಮತ್ತು ಸಮಾಜ ಸೇವೆ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಪ್ರಮುಖವಾಗಿ ವೈದ್ಯಕೀಯ ಆರೈಕೆಗೆ ಹಣಕಾಸು ನೆರವು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಂಬಲ ಮತ್ತು ಬಡವರ ಮನೆಗಳ ನಿರ್ಮಾಣಕ್ಕೆ ಭಾಗಶಃ ಆರ್ಥಿಕ ನೆರವು ಸೇರಿದಂತೆ ಇನ್ನಿತರೆ ನೆರವಿನ ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಸಮಾಜ ಸುಧಾರಣೆ ಯೋಜನೆಗಳಿಗಾಗಿ ಗ್ರೂಪ್ ತನ್ನ ವ್ಯವಹಾರದ ಲಾಭದಲ್ಲಿ ಶೇ.5 ರಷ್ಟನ್ನು ಮೀಸಲಿಟ್ಟಿದೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನ ಲಾಭಾಂಶದ ಭಾಗವೂ ಈ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಇಂತಹ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಗ್ರೂಪ್ ಇದುವರೆಗೆ 246 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.