ಹೊನ್ನಾಳಿ : ಭೀಕರ ಬರಗಾಲದಲ್ಲೂ ಭಕ್ತರ ಭಕ್ತಿಗೆ ಬರಗಾಲವಿಲ್ಲ

ಹೊನ್ನಾಳಿ : ಭೀಕರ ಬರಗಾಲದಲ್ಲೂ ಭಕ್ತರ ಭಕ್ತಿಗೆ ಬರಗಾಲವಿಲ್ಲ

ಸುಂಕದಕಟ್ಟೆಯ ಶ್ರೀ ನರಸಿಂಹಸ್ವಾಮಿ ಮತ್ತು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 46,07,765 ಹಣ ಸಂಗ್ರಹ

ಹೊನ್ನಾಳಿ, ಮೇ 28 – ತಾಲ್ಲೂಕಿನ ಸುಂಕದಕಟ್ಟೆಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಶ್ರೀ ನರಸಿಂಹಸ್ವಾಮಿ ಮತ್ತು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ರೂ. 46,07,765 ಹಣ ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.

ಸುಂಕದಕಟ್ಟೆಯ ದೇವಸ್ಥಾನದ ಸಮುದಾಯ ಭವನದಲ್ಲಿ ಹುಂಡಿ ಹಣ ಎಣಿಕೆಯನ್ನು ವೀಕ್ಷಿಸಿ ಅವರು ಮಾತನಾಡಿದರು. ಸುಂಕದಕಟ್ಟೆಯ ರಥೋತ್ಸವದ ನಂತರ ಮೊದಲನೇ ಬಾರಿಗೆ ಹಣ ಎಣಿಕೆ ಮಾಡುತ್ತಿದ್ದು, ಭೀಕರ ಬರಗಾಲದಲ್ಲೂ ಹೆಚ್ಚಿನ ಹಣವನ್ನು ಭಕ್ತರು ದೇವರ ಹುಂಡಿಗೆ ಸಮರ್ಪಿಸಿ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ ಎಂದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ 2023ರ ಅಕ್ಟೋಬರ್ ತಿಂಗಳಲ್ಲಿ ಹಣ ಎಣಿಕೆ ಸಂದರ್ಭದಲ್ಲಿ 49,70,095 ಹಣ ಸಂಗ್ರಹವಾಗಿದ್ದು, ಈ ಹಣವನ್ನು ಕೆನರಾ ಬ್ಯಾಂಕಿನಲ್ಲಿ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಭಕ್ತರ ಭಕ್ತಿಗೆ ಬರಗಾಲವಿಲ್ಲ ಎಂಬುದಕ್ಕೆ ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹವಾಗಿರುವುದೇ ಸಾಕ್ಷಿಯೆಂದು ರಾಜಸ್ವ ನಿರೀಕ್ಷಕ ಕುಂದೂರು ರಮೇಶ್ ಹರ್ಷ ವ್ಯಕ್ತಪಡಿಸಿದರು. ಹುಂಡಿಯ ಹಣ ಎಣಿಕೆ ಸಂದರ್ಭದಲ್ಲಿ 500ರೂ. ಮುಖಬೆಲೆಯ ಚಲಾವಣೆಯ ಲ್ಲಿಲ್ಲದ ಹಳೆಯ ನೋಟೊಂದು ಕಂಡುಬಂತು.

ಈ ಸಂದ ರ್ಭದಲ್ಲಿ ದೇವ ಸ್ಥಾನದ ಪ್ರಧಾನ ಅರ್ಚಕ ರಾಜು ಸ್ವಾಮಿ, ಸಮಿ ತಿಯ ಸದಸ್ಯರಾದ ಎಸ್.ಕೆ. ಕರಿಯಪ್ಪ, ಎಸ್.ಎಚ್. ಚಂದ್ರಮ್ಮ, ಡಿ.ಟಿ. ಗೌರಮ್ಮ, ಎಸ್.ಎನ್. ಪ್ರಸನ್ನಕುಮಾರ್, ಅಣ್ಣಪ್ಪ ಕೆನರಾ ಬ್ಯಾಂಕ್ ಸಿಬ್ಬಂದಿ ರಾಮಣ್ಣ, ಸತ್ಯನಾರಾಯಣ್, ಮನೋಜ್, ಸಂತೋಷ್, ರಾಜಸ್ವ ನಿರೀಕ್ಷಕರಾದ ಜಯಪ್ರಕಾಶ್, ದಿನೇಶ್ ಬಾಬು, ಗ್ರಾಮ ಆಡಳಿತಾಧಿಕಾರಿಗಳಾದ ದೊಡ್ಡೇಶ್, ಬಸವರಾಜ್, ಸಂತೋಷ್, ಅರ್ಜುನ್, ವೀರೇಶ್, ಚಂದ್ರಕಲಾ, ಅನಿತಾ, ಶಿಲ್ಪ ಮತ್ತು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

error: Content is protected !!