ಹರಪನಹಳ್ಳಿಯಲ್ಲಿ ಶಿಕ್ಷಕರಿಗೆ ತರಬೇತಿ

ಹರಪನಹಳ್ಳಿಯಲ್ಲಿ ಶಿಕ್ಷಕರಿಗೆ ತರಬೇತಿ

ಹರಪನಹಳ್ಳಿ, ಮೇ 27- ಪೋಷಕರು ಹಾಗೂ ಗುರುಗಳು ಉತ್ತಮ  ವಿದ್ಯಾರ್ಥಿಯನ್ನು ರೂಪಿಸಬಹುದು ಎಂದು ಸಾಹಿತಿ ಇಸ್ಮಾಯಿಲ್ ಎಲಿಗಾರ್ ಹೇಳಿದರು. ತಾಲ್ಲೂಕಿನ ಕಾಯಕದಹಳ್ಳಿ ಮಾರ್ಗದಲ್ಲಿರುವ ಪರಿವರ್ತನ ಶಾಲೆಯಲ್ಲಿ ನಡೆದ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳನ್ನು ಸೃಜನಶೀಲ ವ್ಯಕ್ತಿಯಾಗಿಸುವ ಜತೆಗೆ ಮಕ್ಕಳ ದೃಷ್ಟಿಯಲ್ಲಿ ಉತ್ತಮ ಶಿಕ್ಷಕರಾಗಬೇಕು ಎಂದು ಹೇಳಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಸಂತೋಷ ಜೈನ್, ಮುಖ್ಯ ಶಿಕ್ಷಕಿ ಸಿಂಧು, ಸಹ ಶಿಕ್ಷಕಿ ಪದ್ಮಾ, ಗಾಯತ್ರಿ ಮತ್ತು ಇತರರು ಇದ್ದರು.

error: Content is protected !!