ಸ್ಕೀಜೋಪ್ರೇನಿಯ ಎಂಬುದು ತೀವ್ರತರ ಮಾನಸಿಕ ಕಾಯಿಲೆ

ಸ್ಕೀಜೋಪ್ರೇನಿಯ ಎಂಬುದು ತೀವ್ರತರ ಮಾನಸಿಕ ಕಾಯಿಲೆ

ಉಕ್ಕಡಗಾತ್ರಿ : ಸ್ಕೀಜೋಪ್ರೇನಿಯ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ  ಟಿ.ಹೆಚ್.ಓ. ಡಾ. ಖಾದರ್

ಮಲೇಬೆನ್ನೂರು, ಮೇ 24 – ಉಕ್ಕಡಗಾತ್ರಿ ಗ್ರಾಮದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ಹರಿಹರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಪ್ರಾಥಮಿಕ ಆರೋಗ್ಯ ಕೇಂದ್ರ ಉಕ್ಕಡಗಾತ್ರಿ ಮತ್ತು ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ, ಮಾನಸಧಾರಾ ಹಗಲು ಆರೈಕೆ ಕೇಂದ್ರ (ದಾವಣಗೆರೆ) ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ಕೀಜೋಪ್ರೇನಿಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜನಸಾಮಾನ್ಯರಿಗೆ  ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಟಿ.ಹೆಚ್.ಓ. ಡಾ. ಖಾದರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 

ನಂತರ ಮಾತನಾಡಿದ ಡಾ. ಖಾದರ್,   ಸ್ಕೀಜೋಪ್ರೇನಿಯ ಎಂಬುದು ತೀವ್ರತರ ಮಾನಸಿಕ ಕಾಯಿಲೆಯಾಗಿದ್ದು, ಈ ಕಾಯಿ ಲೆಯು 15 ರಿಂದ 25 ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸಿಕೊ ಳ್ಳುತ್ತದೆ. ಮೆದುಳಿ ನಲ್ಲಿರುವ  ರಾಸಾ ಯನಿಕ ಅಂಶಗಳ ಏರುಪೇ ರುಗಳಿಂದಾಗಿ ಮತ್ತು ಜೀವನದಲ್ಲಾಗು ವಂತಹ  ಒತ್ತಡಕಾ ರಕಾಂಶಗಳು, ಅಹಿತಕರ ಘಟನೆಗಳಿಂದ, ಅನುವಂಶಿಯತೆ ಯಿಂದ ಸ್ಕಿಜೋ ಪ್ರೇನಿಯಾ ಕಾಯಿಲೆ ಬರುತ್ತದೆ.   ಈ ಕಾಯಿಲೆಯ ಲಕ್ಷಣಗಳನ್ನು ಗುರುತಿಸಿ ಬೇಗ ಚಿಕಿತ್ಸೆ ಕೊಡಿಸಿದರೆ ಅವರನ್ನು ಗುಣಮುಖರನ್ನಾಗಿ ಮಾಡಬಹುದೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸೈಕ್ಯಾಟ್ರಿಕ್ ಸೋಷಿಯಲ್ ಕಾರ್ಯಕರ್ತ ಸಂತೋಷ್ ಕುಮಾರ್ ಮಾತನಾಡಿ, ಸ್ಕಿಜೋಪ್ರೇನಿಯಾ ಕಾಯಿಲೆಯನ್ನು ಛಿದ್ರ ಮನಸ್ಕತೆಯೆಂದೂ ಕರೆಯಬಹುದು.ಈ ಕಾಯಿಲೆಯು ಒಂದು ಸಾವಿರ ಜನಸಂಖ್ಯೆ ಯಲ್ಲಿ  ಮೂರು ಜನರಲ್ಲಿ ಕಾಣಿಸುವ ಸಾಧ್ಯತೆ ಇದ್ದು, ಈ ಕಾಯಿಲೆ ಇರುವ ವ್ಯಕ್ತಿಯ ಮೆದುಳಿನಲ್ಲಿ ರಾಸಾಯನಿಕ ಅಂಶಗಳ ಬದಲಾವಣೆ ಯಿಂದ ಅವನ ಭಾವನೆಗಳು, ಆಲೋಚನೆ ಗಳು, ವರ್ತನೆ ಗಳ ಮೇಲೆ ಪರಿಣಾಮ ಬೀರುತ್ತದೆ.  ಈ ರೀತಿಯ ಪರಿಣಾಮ ಬೀರಿದಾಗ ಕಾಯಿಲೆ ಇರುವ ವ್ಯಕ್ತಿಯು ಸಮಾಜದ ವಿರುದ್ಧವಾಗಿ ಮತ್ತು ತನ್ನದೇ ಭ್ರಮಾಲೋಕದಲ್ಲಿ, ತನ್ನಷ್ಟಕ್ಕೆ ತಾನೇ ಮಾತನಾಡುವುದು, ಅನು ಮಾನ ಪಡುವುದು, ಸುಮ್ಮನೆ ನಗುವುದು, ಸ್ವಚ್ಛತೆ ಇಲ್ಲದಿರುವ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆಲ್ಲ ಪ್ರಸ್ತುತ ದಿನದ ಒತ್ತಡಕಾರಕ  ಜೀವನ ಮತ್ತು ಅನುವಂಶೀ ಯತೆ, ಮೆದುಳಿನಲ್ಲಿ ಆಗುವ ರಾಸಾಯನಿಕ ಅಂಶಗಳ ಬದಲಾವಣೆ, ಮನೋ ಸಾಮಾಜಿಕ ಸಮಸ್ಯೆಗಳಾಗಿವೆ. ಆದ್ದರಿಂದ ಮಾನಸಿಕ ಕಾಯಿಲೆಗಳ ಲಕ್ಷಣಗಳನ್ನು ಗುರುತಿಸಿ ಮನೋವೈದ್ಯರನ್ನು ಭೇಟಿ ಮಾಡಿದಲ್ಲಿ  ಚಿಕಿತ್ಸೆ, ಸಲಹೆಗಳು ಸಿಗುತ್ತವೆ.  ಜಿಲ್ಲಾಮಟ್ಟದಲ್ಲಿ  ಚಿಕಿತ್ಸೆ ಪಡೆದು ಗುಣ ಮುಖರಾದವರಿಗೆ  ಸಮುದಾಯ ಮಾನ ಸಿಕ ಆರೋಗ್ಯ ಕೇಂದ್ರದಲ್ಲಿ  ಉತ್ತಮವಾದ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡ ಲಾಗುವುದೆಂದು ಸಂತೋಷ್ ತಿಳಿಸಿದರು.

ಮನೋವೈದ್ಯಕೀಯ ಸಂಶೋಧನೆ ವಿದ್ಯಾರ್ಥಿ ಡಾ. ಲಕ್ಷ್ಮಿ ಮಾತನಾಡಿ, ಸ್ಕಿಜೋಪ್ರೇನಿಯಾ ಕಾಯಿಲಿಗೆ ಚಿಕಿತ್ಸೆ ಪಡೆದು ಮನೆಯಲ್ಲಿ ಕುಳಿತರೆ ಸಾಲದು. ಅವರ ಆರೈಕೆದಾರರು ಪ್ರತಿನಿತ್ಯ ಅವರಿಗೆ ಯೋಗ, ಧ್ಯಾನ, ವ್ಯಾಯಾಮ, ಸಂಗೀತ ಕೇಳಿಸುವುದು ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮಾತ್ರ ಚಿಕಿತ್ಸೆಯಿಂದ ಬೇಗ ಗುಣಮುಖರಾಗಿ ಹೊರಹೊಮ್ಮಲು ಸಹಾಯಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ  ಉಕ್ಕಡಗಾತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ  ಡಾ. ನವೀನ್,  ಆರೋಗ್ಯ ಇಲಾಖೆಯ ಜಿಲ್ಲಾ ಮೇಲ್ವಿಚಾರಕ ಹೊರಕೇರಿ, ಹರಿಹರ ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ,   ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಹರಿಹರ ತಾಲ್ಲೂಕು ಆಶಾ ಮೇಲ್ವಿಚಾ ರಕರಾದ ಕವಿತ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸೆಕ್ಯಾಟ್ರಿಕ್ ಸ್ಟಾಪ್ ನರ್ಸ್ ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!