ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ: ಸಿದ್ದೇಶ್ವರ

ಜಿಲ್ಲೆಯಲ್ಲಿ ರಸಗೊಬ್ಬರದ  ಕೊರತೆ ಇಲ್ಲ: ಸಿದ್ದೇಶ್ವರ

ದಾವಣಗೆರೆ,ಮೇ 24-  ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ  ದಾಸ್ತಾನಿದ್ದು, ರೈತರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು  ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ ಒಟ್ಟು 153683 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳ ಬೇಡಿಕೆ ಪೂರೈಸಿ, ಹಾಲಿ 94964 ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನಿದೆ. ಜೂನ್ ತಿಂಗಳ ಬೇಡಿಕೆ 28 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಸಿದರೂ ಕೂಡ 60 ಸಾವಿರ ಮೆಟ್ರಿಕ್ ಟನ್‍ಗೂ ಅಧಿಕ ಗೊಬ್ಬರ ಉಳಿಯಲಿದೆ. 

ಅಲ್ಲದೇ 30 ಸಾವಿರ ಮೆಟ್ರಿಕ್ ಟನ್‍ನಷ್ಟು ಯೂರಿಯಾ ರಸಗೊಬ್ಬರ ಜಿಲ್ಲೆಯಲ್ಲಿ ಲಭ್ಯವಿದೆ. ಉತೃಷ್ಟ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸುವಂತೆ ಕೃಷಿ ಇಲಾಖೆಗೆ ಸಂಸದರು ಸೂಚನೆ ನೀಡಿದ್ದಾರೆ.

ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಬಂದರೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ತರಿಸಿಕೊಡಲಾಗುವುದು ಎಂಬುದನ್ನು ಜಂಟಿ ಕೃಷಿ  ನಿರ್ದೇಶಕರಿಗೆ  ಸಂಸದರು ತಿಳಿಸಿದ್ದಾರೆ.

error: Content is protected !!