ದಾವಣಗೆರೆ, ಮೇ 24- ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಸಿಲ್ಕ್ ಇಂಡಿಯಾ-2024 ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನಕ್ಕೆ ಮಿಸ್ ದಾವಣಗೆರೆ ಸೃಜನಾ ಮತ್ತು ರೂಪದರ್ಶಿ ಮೋನಿಕಾ ಅವರು ಚಾಲನೆ ನೀಡಿದರು.
ಇಂದಿನಿಂದ ಬರುವ ಜೂನ್ 6ರವರೆಗೆ 10 ದಿವಸಗಳ ಕಾಲ ಹೋಟೆಲ್ ಪೂಜಾ ಇಂಟರ್ ನ್ಯಾಷನಲ್ನಲ್ಲಿ ಪ್ರದರ್ಶನ ನಡೆಯಲಿದೆ.
ದೇಶದಲ್ಲಿ ವಾಯುಗುಣ ಮತ್ತು ನಿಸರ್ಗಕ್ಕೆ ಅನುಗುಣವಾಗಿ 4 ವಿವಿಧ ಪ್ರಭೇದದ ರೇಷ್ಮೆಗಳಿದ್ದು, ಅವುಗಳಲ್ಲಿ ಟಸ್ಸರ್, ಎರಿ, ಮುಲ್ಬಾರಿ ಮತ್ತು ಮುಗಾ ರೇಷ್ಮೆ ಪ್ರಮುಖವಾಗಿದ್ದು, ಇದರಲ್ಲಿ ಟಸ್ಸರ್ ಮತ್ತು ಮುಗಾ ರೇಷ್ಮೆಯು ಒಂದು ನೈಜವಾದ ಹಾಗೂ ಉಷ್ಣವಲಯದಲ್ಲಿ ಬೆಳೆಯುವ ವನ್ಯ ರೇಷ್ಮೆ ಹಾಗೂ ಸಾವಯವ (ಆರ್ಗ್ಯಾನಿಕ್) ರೇಷ್ಮೆಯಾಗಿದೆ. ಟಸ್ಸರ್ ಮತ್ತು ಮುಗಾ ರೇಷ್ಮೆ ಉತ್ಪಾದನೆಯಲ್ಲಿ ಅಸ್ಸಾಂ, ಬಿಹಾರ್ ಮತ್ತು ಛತ್ತೀಸ್ ಘಡ ರಾಜ್ಯಗಳು ದೇಶದಲ್ಲಿ ಪ್ರಮುಖವಾಗಿವೆ.
‘ಅಭಿವೃದ್ಧಿ ಸಂಸ್ಥೆಯನ್ನು ಭಾರತದಲ್ಲಿರುವ ಕುಶಲಕರ್ಮಿಗಳು ಮತ್ತು ನೇಕಾರರ ಶ್ರೇಯೋಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.
ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 60 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುವರು.
ಮೇಳದಲ್ಲಿ ಟಸ್ಸರ್ರೇಷ್ಮೆ ಸೀರೆಗಳು,ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕೊಲ್ಕೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಾಲು ಚೆರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೆಟೀರಿಯಲ್ ಗಳು ಮತ್ತು ಸೀರೆಗಳು, ಬಾಗಲ್ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಉಳ್ಳ ಮಲ್ಬೆರಿ ಸಿಲ್ಕ್, ಕೊಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿವೆ.