ಬಸವ ಪ್ರಜ್ಞೆ, ತತ್ವ ಸಿದ್ಧಾಂತ ಆಚರಣೆಗೆ ಬರಬೇಕು

ಬಸವ ಪ್ರಜ್ಞೆ, ತತ್ವ ಸಿದ್ಧಾಂತ ಆಚರಣೆಗೆ ಬರಬೇಕು

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಯ

ಸಾಣೇಹಳ್ಳಿ, ಮೇ 16 – ಬಸವಣ್ಣನವರನ್ನು ಪೂಜೆಗೆ ಸೀಮಿತಗೊಳಿಸದೇ ಬಸವ ಪ್ರಜ್ಞೆ ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ಆಚರಣೆಗೆ ತರಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಇತ್ತಿಚೇಗೆ  ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿ, ಬಸವಣ್ಣನವರು ಜಗತ್ತಿಗೇ ಬೆಳಕನ್ನು ಕೊಡುವ ಕಾರ್ಯದ ಜತೆಗೆ ಅಹಂ ಕಾರ ತೊರೆದು, ಪ್ರತಿಯೊಬ್ಬರನ್ನೂ ಅಪ್ಪಿಕೊಂಡಿ ದ್ದಾರೆ ಎಂದರು. ಅಸ್ಪೃಷ್ಯರು ಹಾಗೂ ತಳಸಮುದಾಯದ ಜನರನ್ನು ಅನುಭವ ಮಂಟಪಕ್ಕೆ ಕರೆಸಿ ಹಲವು ಆಲೋಚನೆಗಳನ್ನು ಕೊಟ್ಟು ವಚನಗಳನ್ನು ಬರೆಸಿದರು ಮತ್ತು ಸ್ತ್ರೀಯರಿಗೆ ಸ್ವಾತಂತ್ರ್ಯ ಕೊಡುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು.

ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರೂ ಸ್ವಾರ್ಥಕ್ಕಾಗಿ ಅಧಿಕಾರ ನಡೆಸದೇ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದರು ಎಂದು ಬಸವರನ್ನು ಸ್ಮರಿಸಿದರು.

ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕ ಎಂದು ಕರೆಯಿಸಿಕೊಳ್ಳುವ ಏಕೈಕ ವ್ಯಕ್ತಿಯೇ ಬಸವಣ್ಣ, ನಮ್ಮ ಶಿವಾಚಾರ್ಯ ಶ್ರೀಗಳು ಬಸವಣ್ಣರನ್ನು ಗೃಹಸ್ಥ ಜಗದ್ಗುರು ಬಸವಣ್ಣ ಎಂದು ಹೇಳುತ್ತಿದ್ದರು ಎಂದರು.

ವೀಣಾ ಮಾತನಾಡಿ, ಸಮಾಜದ ಅಭ್ಯುದಯಕ್ಕಾಗಿ ಅನುಭವ ಮಂಟಪ ಸ್ಥಾಪಿಸಿ, ಅಲ್ಲಮ ಪ್ರಭುಗಳನ್ನು ಅಧ್ಯಕ್ಷರ ನ್ನಾಗಿಸಿ  ಸಾಮಾಜಿಕ ನ್ಯಾಯ ಕ್ಕಾಗಿ ಹೋರಾಟ ಮಾಡಿದರು ಎಂದು ತಿಳಿಸಿದರು.

ಇಷ್ಟಲಿಂಗದ ಪರಿಕಲ್ಪನೆ ಮೂಲಕ ಸಮಾಜವಾದ ಮತ್ತು ಸಮತಾವಾದ ತತ್ವಗಳನ್ನು ಜಾರಿಗೆ ತಂದು ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ಜತೆಗೆ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಪ್ರಾಚಾರ್ಯ ನಟರಾಜ್ ಹೊನ್ನವಳ್ಳಿ, ಶಿಕ್ಷಕಿ ಸುಧಾ, ಸ್ಥಳೀಯರಾದ ಕೃಷ್ಣಪ್ಪ, ಹೊನ್ನೇಶಪ್ಪ, ಶಿವಕುಮಾರ್ ಮತ್ತಿತರರಿದ್ದರು.

ಅಕ್ಕನ ಬಳಗದವರು ವಚನ ಗಾಯನ ಮಾಡಿದರು. ಸಾಣೇಹಳ್ಳಿಯ ಶಾಲಾ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು.

error: Content is protected !!