ರಾಣೇಬೆನ್ನೂರು : ಕವಿ ಮಾಗಿ ಬಾಗದ ಹೊರತು ಕಾವ್ಯ ರಚನೆ ಸಾಧ್ಯವಿಲ್ಲ

ರಾಣೇಬೆನ್ನೂರು : ಕವಿ ಮಾಗಿ ಬಾಗದ ಹೊರತು ಕಾವ್ಯ ರಚನೆ ಸಾಧ್ಯವಿಲ್ಲ

ರಾಣೇಬೆನ್ನೂರು, ಮೇ 16 – ಕಾವ್ಯ ದಿಢೀರಾದ ಹುಟ್ಟಲಾರದು.  ಕವಿಯು ಮಾಗಿ ಬಾಗದ ಹೊರತು ಗಟ್ಟಿ ಕಾವ್ಯ ರಚನೆ ಸಾಧ್ಯವಾಗದು. ಕಾವ್ಯ ಮನಸ್ಸಿಗೆ ಮುಟ್ಟುವಂತಿರಬೇಕು ಎಂದು ಹಾವೇರಿಯ ಕವಯತ್ರಿ ಡಾ.  ಪುಷ್ಪಾ ಶಲವಡಿಮಠ ಹೇಳಿದರು. ಮಹಾದೇವಕ್ಕ ಮಂಗಳವಾದ್ಯ ಸಂಗೀತ ತರಬೇತಿ ಸಂಸ್ಥೆಯ  ಬಸವೇಶ್ವರ ಜಯಂತಿ ಕಾರ್ಯಕ್ರಮದ ಜಿಲ್ಲಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸೋಲು, ನೋವು, ಅವಮಾನಗಳು ಕಾವ್ಯದ ಹುಟ್ಟಿಗೆ ಕಾರಣವಾಗಲಿವೆ. ಕವಿ ಹೃದಯ ಸದಾ ತೆರೆದಿರಬೇಕು.  ಕವಿ ಸಮಾಜ ಸುಧಾರಕನಾಗಿರುತ್ತಾನೆ. ಆ ದಿಶೆಯಲ್ಲಿ ಕಾವ್ಯಗಳ ರಚನೆ ಆಗಲಿವೆ ಎಂದು ಕಸಾಪ ಭವನದಲ್ಲಿ ನಡೆದ  ಕವಿಗೋಷ್ಠಿಯಲ್ಲಿ ಡಾ. ಪುಷ್ಪಾ ಶಲವಡಿ ಮಠ ಹೇಳಿದರು.

ವೀರೇಶ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ  ಪ್ರಭಾಕರ ಶಿಗ್ಲಿ, ಪ್ರಕಾಶ ಸೊಪ್ಪಿನ, ಬಸವರಾಜ, ಚನಬಸಪ್ಪ ನಾಡಾರ, ಮಂಜುನಾಥ ಬೂದನೂರ, ಲಕ್ಷ್ಮಿ ಅಡಿಕೆ, ಪ್ರಕಾಶ ಮತ್ತಿತರರಿದ್ದರು. 25 ಕವಿಗಳ ಕವಿತೆ ವಚನ ಮಾಡಿದರು.

error: Content is protected !!