ಮಲೇಬೆನ್ನೂರು, ಮೇ 14 – ಬೆಳ್ಳೂಡಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.
ಸಕಾಲಕ್ಕೆ ಮಳೆ ಬಾರದಿದ್ದಾಗ ಮಳೆಗಾಗಿ ಪ್ರಾರ್ಥಿಸಿ, ಜನರು ಕಪ್ಪೆ ಮೆರವಣಿಗೆ ಮತ್ತು ಕತ್ತೆಗಳಿಗೆ ಮದುವೆ ಮಾಡಿ ಮೆರವಣಿಗೆ ಮಾಡುವ ಸಂಪ್ರದಾಯ ಬಹುತೇಕ ಹಳ್ಳಿಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.