ಪ್ರಥಮ ವರ್ಷದ ಡಿಪ್ಲೋಮ ಪ್ರವೇಶಕ್ಕೆ ಮೆರಿಟ್ ಆಧಾರಿತ ಆನ್‍ಲೈನ್ ಅರ್ಜಿ

ದಾವಣಗೆರೆ, ಮೇ 14 – ಪ್ರಸಕ್ತ ಸಾಲಿನಲ್ಲಿ ದಾಗಿನಕಟ್ಟೆ ಶ್ರೀ ಕೆಂಗಪ್ಪ ನಾಯಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೋಮ ಪ್ರವೇಶಕ್ಕೆ ಮೆರಿಟ್ ಆಧಾರಿತ ಆನ್‍ಲೈನ್ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನಿಷ್ಠ ಶೇ.35 ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು HYPERLINK “http://www.dtek.kar.nic.in/” \t “_blank” www.dtek.kar.nic.in ವೆಬ್‍ಸೈಟ್ ಮೂಲಕ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಇದೇ ದಿನಾಂಕ ಮೇ 21 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಶ್ರೀ ಕೆಂಗಪ್ಪ ನಾಯಕ  ಸರ್ಕಾರಿ ಪಾಲಿಟೆಕ್ನಿಕ್ ದಾಗಿನಕಟ್ಟೆ ಇವರನ್ನು ಅಥವಾ ದೂ. ಸಂ : 9448414180, 9844197172, 8861360348 ಗೆ ಸಂಪರ್ಕಿಸಲು ಕೋರಲಾಗಿದೆ.

error: Content is protected !!