ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ

ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ

ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ - Janathavaniದಾವಣಗೆರೆ, ಮೇ 14 – ನಗರದ ಕೊಂಡಜ್ಜಿ ರಸ್ತೆ ಎಸ್.ಜೆ.ಎಂ. ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ಆರೋಗ್ಯ ಕೇಂದ್ರವು ಎಸ್.ಜೆ.ಎಂ.  ನಗರ, ಎಸ್‌.ಎಂ.ಕೃಷ್ಣ ನಗರದ ಸುತ್ತಮುತ್ತಲಿನ ನಿವಾಸಿಗಳಿಗೆ ವರದಾನವಾಗಿದೆಯಾದರೂ, ಆ ಕೇಂದ್ರದಲ್ಲಿನ ಅವ್ಯವಸ್ಥೆಯಿಂದಾಗಿ ಜನರು ಚಿಕಿತ್ಸೆಗಾಗಿ ಪರದಾಡುತ್ತಿದ್ದು, ದೂರದ ಚಿಕಿತ್ಸಾ ಕೇಂದ್ರವನ್ನು ಅವಲಂಬಿಸುವಂತಾಗಿದೆ.

ಇಲ್ಲಿ ವೈದ್ಯರು ಒಬ್ಬರೇ ಇದ್ದಾರೆ, ಕನಿಷ್ಟ ಇಬ್ಬರು ವೈದ್ಯರು, ಅಗತ್ಯ ಸಿಬ್ಬಂದಿ ವರ್ಗದವರು ಬೇಕಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರವರೆಗೆ ಮಾತ್ರ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ದಿನದ 24 ಗಂಟೆಯೂ ಸೇವೆ ಸಲ್ಲಿಸುವಂತಾಗಬೇಕು. ಕನಿಷ್ಟ 15 ರಿಂದ 20 ಹಾಸಿ ಗೆಯ ಆಸ್ಪತ್ರೆಯನ್ನಾಗಿಸಬೇಕು.

ಎಸ್.ಜೆ.ಎಂ.  ನಗರದ ಸುತ್ತಮುತ್ತಲಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆ ತಕ್ಷಣವೇ ಚಿಕಿತ್ಸೆ ಸಿಗದ ಕಾರಣ ಸಾವು-ನೋವುಗಳು ಹೆಚ್ಚುತ್ತಿವೆ. ಈ ಭಾಗದಲ್ಲಿ ಪ್ರಮುಖ ಎರಡು ರಸ್ತೆಗಳಿದ್ದು, ಇಲ್ಲಿ ರಸ್ತೆ ಅಪಘಾತಗಳಾದ ಸಂದರ್ಭ ದಲ್ಲಿ ಪ್ರಾಥಮಿಕ ಚಿಕಿತ್ಸೆ ಸಿಗದೇ ದೂರದ ಆಸ್ಪತ್ರೆಗಳಿಗೆ ಹೋ ಗುವ ವೇಳೆಗೆ ಸಾವುಗ ಳಾಗಿರುವ ಅನೇಕ ಪ್ರಕರಣಗಳು ಘಟಿಸಿವೆ. 

ಒಟ್ಟಿನಲ್ಲಿ ಈ ಆಸ್ಪತ್ರೆಯನ್ನು ಸುಸಜ್ಜಿತವನ್ನಾಗಿಸಿದ್ದಲ್ಲಿ ಇಲ್ಲಿನ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ, ಮಹಾನಗರ ಪಾಲಿಕೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರುವು ದಿಲ್ಲ. ಜಿಲ್ಲಾಡಳಿತವು ತಕ್ಷಣವೇ ಗಮನ ಹರಿಸುವಂತೆ ಎಂ.ಎನ್. ನಾಗರಾಜ್ ಮನವಿ ಮಾಡಿದ್ದಾರೆ.

ಇದೇ ರೀತಿ ಹಳೇ ಊರಿನ ದೊಡ್ಡಪೇಟೆಯಲ್ಲಿ ಐನಳ್ಳಿ ಸರ್ಕಾರಿ ಪ್ರಾಥಮಿಕ ಕೇಂದ್ರ ಇದ್ದು ಈ ಆಸ್ಪತ್ರೆಯನ್ನೂ ಸುಸಜ್ಜಿತವಾಗಿಸಿದ್ದಲ್ಲಿ ಹಳೇ ಊರಿನ ಜನರು ದೂರದ ಆಸ್ಪತ್ರೆಗಳ ಆಶ್ರಯ ತಪ್ಪಿದಂತಾಗಿ, ತಕ್ಷಣ ಚಿಕಿತ್ಸೆ ದೊರೆತು ಆರೋಗ್ಯದಿಂದಿರಲು ಅನುಕೂಲವಾಗುತ್ತದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

error: Content is protected !!