ಶಾಸ್ತ್ರಿಹಳ್ಳಿ : ಇಂದು ಪುಣ್ಯಾರಾಧನೆ ಮಹೋತ್ಸವ

ದಾವಣಗೆರೆ : ಶ್ರೀ ಶಿವ ದೇವಾನಂದಗಿರಿ ಸ್ವಾಮಿಗಳ 24ನೇ ಪುಣ್ಯಾರಾಧನೆ ಮಹೋತ್ಸವವನ್ನು ಸಮೀಪದ ಶಾಸ್ತ್ರಿಹಳ್ಳಿ ಅಭಯಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 7.05 ರಿಂದ ವೇದ ಪಠಣ ಮತ್ತು ಗೀತಾ ಪಾರಾಯಣ, ಬೆಳಿಗ್ಗೆ 7.30ಕ್ಕೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, 10.15ಕ್ಕೆ ಶ್ರೀಗಳ ಪುಣ್ಯಸ್ಮರಣೆಯ ಸಭೆ ಪ್ರಾರಂಭವಾಗುವುದು.

ಅಭಯಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಆರ್.ಆರ್. ರಮೇಶ್‌ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 

ಹೆಚ್.ಬಿ. ಮಂಜುನಾಥ್ ರಾಮನಾಮ ಮಹಿಮೆ ಹಾಗೂ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳು ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಜೀ ಮಹಾರಾಜ್ ಅವರಿಂದ ಆಶೀರ್ವಚನ ನಡೆಯಲಿದೆ ಎಂದು ಅಭಯಾಶ್ರಮ ಸೇವಾ ಟ್ರಸ್ಟ್‌ನವರು ತಿಳಿಸಿದ್ದಾರೆ.

error: Content is protected !!