ಹರಿಹರ, ಮೇ 12 – ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಿಸಲಾಯಿತು.
ಕದಳಿ ಮಹಿಳಾ ವೇದಿಕೆಯವರು ವಚನ ಗಾಯನ ಮಾಡಿದರು. ಅನೇಕರು ಬಸವಣ್ಣನವರ ಹಾಗೂ ಹೇಮರೆಡ್ಡಿ ಮಲ್ಲಮ್ಮನ ಆದರ್ಶ ಮತ್ತು ವಿಚಾರಧಾರೆಯನ್ನು ಪ್ರಸ್ತುತ ಪಡಿಸಿದರು.
ಈ ವೇಳೆ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ, ತಾ.ಪಂ ಇಓ ರಾಮಕೃಷ್ಣಪ್ಪ, ಬಿಇಓ ಹನುಮಂತಪ್ಪ, ಬಸವರಾಜಯ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಬಸವರಾಜ್ ಓಂಕಾರಿ, ವೀರೇಶ್ ಯಾದವಾಡ್, ಜಿ.ಕೆ. ಮಲ್ಲಿಕಾರ್ಜುನ, ಕರಿಬಸಪ್ಪ ಕಂಚಿಕೇರಿ, ಅಕ್ಕಿ ರಾಜಣ್ಣ, ಕದಳಿ ಮಹಿಳಾ ವೇದಿಕೆಯ ರೂಪಾ ಕುರುವತ್ತಿ, ಸುನೀತಾ ಮಾರಳ್ಳಿ, ಪ್ರೇಮಾ, ಶಂಕುತಲಾ, ಭಾರತಿ, ಶಿವಲಿಂಗಮ್ಮ, ಮೀನಾಕ್ಷಿ, ಹನುಮಂತ ರೆಡ್ಡಿ, ಮಂಜುನಾಥ್ ರೆಡ್ಡಿ, ಕೃಷ್ಣ ರೆಡ್ಡಿ, ಬಸಪ್ಪ ರೆಡ್ಡಿ, ಗಿರಿಗೌಡ, ಕೊಟ್ರೇಶ್ ರೆಡ್ಡಿ, ಮಲ್ಲಪ್ಪ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಸಂತೋಷ್, ಸೋಮಶೇಖರ್ ಇದ್ದರು.