ಗೋಣಿವಾಡ : ಸೋಮೇಶ್ವರ ವಸತಿಯುತ ವಿದ್ಯಾಲಯಕ್ಕೆ ಶಾಲೆಗೆ ಶೇ. 100 ಫಲಿತಾಂಶ

ಗೋಣಿವಾಡ : ಸೋಮೇಶ್ವರ ವಸತಿಯುತ ವಿದ್ಯಾಲಯಕ್ಕೆ ಶಾಲೆಗೆ ಶೇ. 100 ಫಲಿತಾಂಶ

ದಾವಣಗೆರೆ, ಮೇ 9- ಚನ್ನಗಿರಿ ರಸ್ತೆಯ ಗೋಣಿವಾಡ ಕ್ರಾಸ್‌ನಲ್ಲಿರುವ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯಕ್ಕೆ ಈ ಬಾರಿಯ  ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 100 ಲಭಿಸಿದೆ.

ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯಕ್ಕೆ ಗ್ರಾಮಾಂತರ ಭಾಗದಲ್ಲಿ ಸತತ 10ನೇ ವರ್ಷವೂ ಶೇ. 100 ಫಲಿತಾಂಶ ಪಡೆದ ಹೆಗ್ಗಳಿಕೆ ಇದೆ.

ಜಿಲ್ಲೆಯ ಆಲೂರು ಗ್ರಾಮದ ರವಿ ಹಾಗೂ ಪದ್ಮ ಎಂಬ ಕೃಷಿಕ ದಂಪತಿಯ ಮಗಳು ಲಿಖಿತಾ ಶೇ. 98.24 ಅಂಕ ಗಳಿಸುವ ಮೂಲಕ ಗ್ರಾಮಾಂತರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ಒಟ್ಟು 45 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಈ ಸಾಧನೆಗೆ ಸಹಕರಿಸಿದ ಶಾಲೆಯ ಎಲ್ಲರನ್ನೂ ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಕೆ.ಎಂ. ಸುರೇಶ್ ಅಭಿನಂದಿಸಿದ್ದಾರೆ.

error: Content is protected !!