ಹರಿಹರ, ಮೇ 6 – ನಗರದ ಹರಪನಹಳ್ಳಿ ರಸ್ತೆಯ ಸೆಂಟ್ ಮೇರಿಸ್ ಶಾಲಾ ಆವರಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತ 1436 ಇಡಿಸಿ ಪತ್ರವನ್ನು ನೋಡಲ್ ಅಧಿಕಾರಿ ಬಿ.ಇ.ಒ.ಎಂ. ಹನುಮಂತಪ್ಪ ವಿತರಣೆ ಮಾಡಿದರು.
ಹೊರ ಜಿಲ್ಲೆ ಮತಗಟ್ಟೆ ಅಧಿಕಾರಿಗಳು 227, ಚುನಾವಣೆ ಪ್ರಮಾಣ ಪತ್ರ ಸಿಬ್ಬಂದಿಗಳು 836, ಎ.ವಿ.ಇ.ಎಸ್. ಅಧಿಕಾರಿಗಳು 94 ಪೊಲೀಸ್ ಸಿಬ್ಬಂದಿಗಳು 119 ಸೇರಿದಂತೆ ಒಟ್ಟು1436 ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಇ.ಡಿ.ಸಿ. ಪತ್ರವನ್ನು ನೀಡಿದರು.
ಚುನಾವಣೆ ಪ್ರಮಾಣ ಪತ್ರಗಳು ಬಹುತೇಕ ಎಲ್ಲರಿಗೂ ತಲುಪಿದ್ದು, ಉಳಿದ ತಲುಪದೇ ಇರುವ ಸಿಬ್ಬಂದಿಗಳಿಗೆ ಸೆಕ್ಟರ್ ಅಧಿಕಾರಿಗಳ ಜೊತೆಗೆ ಕಳಿಸಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಗುರುಬಸವರಾಜ್, ಪೌರಾಯುಕ್ತ ಐಗೂರು ಬಸವರಾಜ್, ಕೃಷಿ ಇಲಾಖೆಯ ನಾರನಗೌಡ, ಶಿಕ್ಷಣ ಇಲಾಖೆಯ ಬಸವರಾಜಯ್ಯ, ನಂಜುಂಡಪ್ಪ, ಸತೀಶ್ ಕುಮಾರ್, ಶಿಲ್ಪಾ, ಲಕ್ಷ್ಮಿ ದೇವಿ, ಡಿ. ಮಂಜುನಾಥ್, ತಾಲ್ಲೂಕು ಆಡಳಿತದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.