ದೇಶದ ಉಳಿವಿಗಾಗಿ ಮೋದಿ ಪರಿವಾರ ಕೆಳಗಿಳಿಸಬೇಕು : ನಟ ಪ್ರಕಾಶ್‌ ರಾಜ್‌

ದೇಶದ ಉಳಿವಿಗಾಗಿ ಮೋದಿ ಪರಿವಾರ ಕೆಳಗಿಳಿಸಬೇಕು : ನಟ ಪ್ರಕಾಶ್‌ ರಾಜ್‌

ರಾಣೇಬೆನ್ನೂರಿನಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ 

ಹಾವೇರಿ, ಮೇ 5 – ಭಾರತ ದೇಶ ಕಳೆದ 10 ವರ್ಷಗಳಿಂದ ಆತಂಕವಾದಿಗಳ ಕೈಯಲ್ಲಿದೆ. ಮೋದಿ ಮತ್ತು ಅವರ ಪರಿವಾರವನ್ನು ಈ ಬಾರಿ ಕೆಳಗಿಳಿಸಲು ಎಲ್ಲಾ ರೈತ ಸಂಘಟನೆಗಳು, ಪ್ರಗತಿಪರ, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಒಂದಾಗಬೇಕೆಂದು ಖ್ಯಾತ ಬಹುಭಾಷಾ ನಟ, ದಿಟ್ಟ ನಿಲುವಿನ ಪ್ರಗತಿಪರ ಚಿಂತಕ ಪ್ರಕಾಶ್ ರಾಜ್ ಕರೆ ನೀಡಿದರು. 

ಹಾವೇರಿಯ ಸಜ್ಜನ್ ಫಂಕ್ಷನ್ ಹಾಲ್‍ನಲ್ಲಿ ನಡೆದ ವಿಶ್ವದ 138 ನೇ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ನಿಮಿತ್ಯ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟ ಮತ್ತು ಎದ್ದೇಳು ಕರ್ನಾಟಕ  ಹಾವೇರಿಯ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಹಕ್ಕಗಳ ಹಕ್ಕೊತ್ತಾಯಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರೈತಾಪಿ ವರ್ಗದವರನ್ನು ಸಂಪೂರ್ಣ ನೆಲಕಚ್ಚುವ ಸ್ಥಿತಿಗೆ ತಂದ ಕೀರ್ತಿ ಮಹಾನಾಯಕ ಮೋದಿಗೆ ಸಲ್ಲುತ್ತದೆ ಎಂದರು. ಅವರು ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯಿತಿ, ಸ್ತ್ರೀ ಶಕ್ತಿ ಒಕ್ಕೂಟಗಳ ನೌಕರರ, ಕಾರ್ಮಿಕರು, ರೈತರು, ದಲಿತಪರ, ಪ್ರಗತಿಪರ  ಸಂಘಟನೆಗಳು ಸೇರಿದಂತೆ ಶ್ರಮಿಕ ವರ್ಗಗಳು ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಮೋದಿ ಮತ್ತು ಅವರ ಪರಿವಾರವನ್ನು ಅಧಿಕಾರದಿಂದ ಕೆಳಗಿಸಬೇಕೆಂದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ರೈತಪರ ಸಂಘಟನೆಗಳ ರವೀಂದ್ರಗೌಡ ಎಫ್. ಪಾಟೀಲ ಎ.ಎಂ ನಾಯಕ ಸಂವಿಧಾನ ವಿರೋಧಿ ಬಿಜೆಪಿ ಯನ್ನು ಅಧಿಕಾರದಿಂದ ಕೆಳಗಿಸಬೇಕೆಂದರು ಕರೆ ನೀಡಿ ಸಂಘಟನೆಗಳ ಪರವಾಗಿ ಪ್ರಕಾಶ ರಾಜ್‍ರವರಿಗೆ ಹಸಿರು ಶಾಲು ಹೊದಿಸಿ ಸತ್ಕರಿಸಿದರು. ಸಾಮಾಜಿಕ ಹೋರಾಟಗಾರಳಾದ ಅಕ್ಷತಾ ಕೆ.ಸಿ. ಎದ್ದೇಳು ಕರ್ನಾಟಕ ಚಳುವಳಿಯ ಸಂಸ್ಥಾಪಕ ಶ್ರೀನೂರ ಶ್ರೀಧರ್, ರೈತ  ಮುಖಂಡ ಹನುಮಂತಪ್ಪ ಕಬ್ಬಾರ, ಎಸ್‍ಎಫ್‍ಐ  ಮುಖಂಡ ಬಸವರಾಜ ಬೋವಿ, ವಕೀಲರಾದ ಬಸವರಾಜ ಹಾದಿಮನಿ ಮುಂತಾದವರು ಭಾಗವಹಿಸಿದ್ದರು. ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

ಹಾವೇರಿ ಜಿಲ್ಲಾ ವಿವಿಧ ಒಕ್ಕೂಟಗಳ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ ಅಧ್ಯಕ್ಷತೆ ವಹಿಸಿದ್ದರು. 

error: Content is protected !!