ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಬೆಂಬಲಿಸಲು ಕರೆ
ದಾವಣಗೆರೆ, ಮೇ 5 – ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದಾವಣಗೆರೆ ಉತ್ತರ ವಿಧಾನಸಭಾ ಮತದಾರರು ಪ್ರಜ್ಞಾವಂತರಿದ್ದು, ಪ್ರಜ್ಞಾವಂತಿಕೆಯನ್ನು ತೋರಿಸಬೇಕಿದೆ ಎಂದು ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಅವರು ಕರೆ ನೀಡಿದರು.
ಅವರಿಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಮತಯಾಚಿಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಇನ್ನಷ್ಟು ಅಭಿವೃದ್ಧಿಗೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಪ್ರಜ್ಞಾವಂತ ಮತದಾರರು ಬೆಂಬಲಿಸುವ ಮೂಲಕ ಲೋಕಸಭೆಗೆ ಕಳುಹಿಸಬೇಕೆಂದರು.
ಕುಂದವಾಡ ಕೆರೆ, ಗಾಜಿನ ಮನೆ ಮತ್ತು 15 ಸಾವಿರ ಜನರಿಗೆ ಸೂರು ಕಲ್ಪಿಸಿದ ಕೀರ್ತಿಯನ್ನು ಹೊಂದಿರುವ ಎಸ್ಸೆಸ್ ಮತ್ತು ಸಚಿವ ಎಸ್ಸೆಸ್ಸೆಂ ಅವರು ದಾವಣಗೆರೆ ಜಿಲ್ಲೆ ಮತ್ತು ಇನ್ನಷ್ಟು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದ ಸಹಾಯಧನ ಅವಶ್ಯಕತೆ ಇದ್ದು, ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ಹಲವು ಅನುದಾನಗಳನ್ನು ತಂದು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವರು ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮೇಕಾ ಮುರುಳಿಕೃಷ್ಣ, ರಾಮಮೂರ್ತಿ, ಎಸ್.ಎನ್. ಬಸವರಾಜ್, ಮಂಜುನಾಥ್, ಹರೀಶ್, ವೆಂಕಟೇಶ್ ನಾಯಕ, ಶಶಿ, ಕಾಳಾಚಾರಿ, ಚನ್ನಬಸಪ್ಪ, ರಮೇಶ್, ಭೀಮೇಶ್, ಲಿಂಗರಾಜ್, ಪ್ರದೀಪ್, ರಾಜಣ್ಣ, ಬಾಪೂಜಿ ಬ್ಯಾಂಕ್ ರವಿ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.