ದಾವಣಗೆರೆ, ಮೇ 5 – ನಗರದ ಹೈಸ್ಕೂಲ್ ಮೈದಾನದಲ್ಲಿ ನಿನ್ನೆ ನಡೆದ ಪ್ರಜಾಧ್ವನಿ-2 ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದ್ದು, ಇಂದು ಜಿಲ್ಲಾ ಕ್ರೀಡಾಪಟುಗಳು ಸ್ವಚ್ಚಗೊಳಿಸಿದರು.
ಜಿಲ್ಲಾ ಕ್ರೀಡಾಪಟುಗಳ ಸಂಘ ಹಾಗೂ 17ನೇ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರಿಂದ ದಿನೇಶ್ ಕೆ.ಶೆಟ್ಟಿಯವರ ನೇತೃತ್ವದಲ್ಲಿ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಸ್ವಚ್ಚತಾ ಕಾರ್ಯ ನಡೆಸಿದ ಕ್ರೀಡಾಪಟುಗಳು ಎಲ್ಲೇಂದರಲ್ಲಿ ಕಸ ಹಾಕದಂತೆ ಸಾರ್ವಜನಿಕರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಕ್ರೀಡಾಪಟು ಗಳಾದ ಎಸ್.ಮಲ್ಲಿಕಾರ್ಜುನ್, ಜಯಪ್ರಕಾಶ್ ಗೌಡ, 17ನೇ ವಾರ್ಡ್ ಅಧ್ಯಕ್ಷ ಮಧು ಪವಾರ್, ಪರಶುರಾಮ್ ಯುವರಾಜ್, ತಿಮ್ಮೇಶ್, ಸುರೇಶ್ ಮತ್ತಿತರರಿದ್ದರು.