ಸಾಮಾಜಿಕ ನ್ಯಾಯ ಸಮಿತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಬೆಂಬಲಿಸಿ, ಎಸ್ಸೆಸ್ಸೆಂಗೆ ಸನ್ಮಾನ

ಸಾಮಾಜಿಕ ನ್ಯಾಯ ಸಮಿತಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಬೆಂಬಲಿಸಿ, ಎಸ್ಸೆಸ್ಸೆಂಗೆ ಸನ್ಮಾನ

ದಾವಣಗೆರೆ, ಮೇ 5 – ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ವಕೀಲರ ಭವನದಲ್ಲಿ ಮತಯಾಚನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲಾ ಸಮಾಜಿಕ ನ್ಯಾಯ ಸಮಿತಿಯಿಂದ ಸನ್ಮಾನಿಸಲಾಯಿತು. 

ಜಿಲ್ಲಾ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರೂ ಆಗಿರುವ ವಕೀಲ ಎಸ್. ಪರಮೇಶ್ವರ್ ಮಾತನಾಡಿ, ಸಂವಿಧಾನದ ಉಳುವಿಗಾಗಿ, ದೇಶದ ಉಳುವಿಗಾಗಿ ಹಾಗೂ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿಕೊಂಡರಲ್ಲದೇ, ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣವನ್ನು ಖಂಡಿಸಿದರು.  

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಬಂದ ನಂತರ  ಗ್ಯಾರಂಟಿ ಯೋಜನೆ ಜಾರಿಗೆ ತಂದು ಜನ ಸಾಮಾನ್ಯರಿಗೆ ಅನುಕೂಲವಾಗಿದೆ.  ಸಾಮಾಜಿಕ ನ್ಯಾಯವನ್ನು ಒದಗಿಸಿದೆ.  ಅಲ್ಲದೇ, 6ನೇ ಗ್ಯಾರಂಟಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರಿಂದ ಬಹುವರ್ಷಗಳಿಂದ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದ ವಕೀಲರಿಗೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ ಎಂದು ಹೇಳಿದರು.  ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಮತ ನೀಡುವಂತೆ ಕೋರಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ನ್ಯಾಯ ಸಮಾಜದ ಅಧ್ಯಕ್ಷ ಎಸ್‌. ಪರಮೇಶ್‌, ಕಾಂಗ್ರೆಸ್‌ ಹಿರಿಯ ಮುಖಂಡ ರಾಮಚಂದ್ರ ಕಲಾಲ್, ಗೌರವ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ಉಪಾಧ್ಯಕ್ಷ ಸಿ. ಶ್ಯಾಮ್‌, ರಂಗಸ್ವಾಮಿ,
ಕೆ.ಕೆ, ಬಾಬು ಗೋಸಾಯಿ,
ವಿ ಗೋಪಾಲ್‌, ಆವರಗೆರೆ ವಿಜಯ ಕುಮಾರ್‌, ವಿ.ಟಿ. ಪ್ರಕಾಶ್‌, ಧ್ಯಾನಪ್ಪ ಅನುಷ್‌ಪಾಡ್‌, ನಾಗರಾಜ್‌, ಕಾಶೀನಾಥ್‌ ಹಾಗೂ ಇತರೆ ಕಾಂಗ್ರೆಸ್‌ ಮುಖಂಡರು ಹಾಜರಿದ್ದರು. ವೇದಿಕೆಯ  ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‌ಕುಮಾರ್‌ ವಹಿಸಿದ್ದರು. ಕಾರ್ಯದರ್ಶಿ ಬಸವರಾಜ್‌ ನಿರೂಪಿಸಿದರು.

error: Content is protected !!