ನ್ಯಾಮತಿ ತಾಲ್ಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಂ.ಸುಧಾ ಆಯ್ಕೆ

ನ್ಯಾಮತಿ ತಾಲ್ಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎಂ.ಸುಧಾ ಆಯ್ಕೆ

ನ್ಯಾಮತಿ, ಮೇ 2 – ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಸುಧಾ ಅವರು ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಬಸವರಾಜ ಬಾವಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸುಧಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು ಎಂದು ಚುನಾವಣಾಧಿಾರಿ ಎಸ್.ಆರ್. ಗಿರಿಜಮ್ಮ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಆರ್.ಜಗದೀಶ, ಉಪಾಧ್ಯಕ್ಷ ತಿಮ್ಮಪ್ಪ ಹಾಗೂ  ಆಡಳಿತ ಮಂಡಳಿಯ ಸಂಘದ ಗೌರವಾಧ್ಯಕ್ಷ ಎಂ.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಜ್ಞಾನೇಶ, ಖಜಾಂಚಿ ಜಿ.ಒ.ಅನ್ನಪೂರ್ಣಮ್ಮ, ತಿಮ್ಮಪ್ಪ, ಎಚ್. ಗೌರಮ್ಮ, ವೆಂಕಟೇಶನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಸಂತೋಷ, ಕಾರ್ಯದರ್ಶಿ ಸಿದ್ದಪ್ಪ ಜಿಗಣಪ್ಪನವರ, ಬಸವರಾಜಪ್ಪ, ಪುರುಷೋತ್ತಮ ಹಾಗೂ ಅವಳಿ ತಾಲ್ಲೂಕಿನ ಶಿಕ್ಷಕರು ಶುಭಹಾರೈಸಿದರು.   

error: Content is protected !!