ದಾವಣಗೆರೆ, ಮೇ 2- ಚುನಾವಣಾ ಕರ್ತವ್ಯ ನಿರತರಾದ ಅಪರ ಜಿಲ್ಲಾಧಿಕಾರಿ ಸೇರಿದಂತೆ 228 ಹೊರ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿ ಬುಧವಾರ ಅಂಚೆ ಮತದಾನ ಮಾಡಿದರು.
ಅಗತ್ಯ ಸೇವಾ ಇಲಾಖೆಯ ಮತದಾರರು ಮತ್ತು ಚುನಾವಣಾ ಕರ್ತವ್ಯ ನಿರತರಿಗೆ ಮೇ.3ರ ವರೆಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕರ್ತವ್ಯ ಮಾಡುತ್ತಿರುವ 901 ಮತದಾರರು ಅಂಚೆ ಮತದಾನಕ್ಕಾಗಿ 12ಡಿ ರಡಿ ಘೋಷಣೆ ಮಾಡಿದ್ದರು. ಈ ನಿಟ್ಟಿನಲ್ಲಿ ಮೇ.1 ರಂದು ಅಗತ್ಯ ಸೇವಾ ಇಲಾಖೆಯ 153 ಮತದಾರರು ಅಂಚೆ ಮತದಾನ ಮಾಡಿದ್ದಾರೆ.
ಕರ್ತವ್ಯ ನಿರತ 1,128 ಮತದಾರರಲ್ಲಿ 75 ಅಧಿಕಾ ರಿಗಳು ಮತ್ತು ಸಿಬ್ಬಂದಿ ಮೇ.01 ರಂದು ಮತದಾನ ಮಾಡಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾ ರರಾದ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವುದರಿಂದ ಅಂಚೆ ಸೌಲಭ್ಯದಿಂದ ಮತದಾನ ಮಾಡಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರಾದ ಭೂ ಮಾಪನ ಇಲಾಖೆಯ ಉಪನಿರ್ದೇಶಕರು ಹಾಗೂ ಹರಿಹರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭಾವನಾ ಅವರು ಅಂಚೆ ಮತದಾನದ ಮೂಲಕ ಮತ ಚಲಾಯಿಸಿದರು.