ರಾಣೇಬೆನ್ನೂರಿನಲ್ಲಿ ಅಮೀತ್ ಷಾ ಮನವಿ
ರಾಣೇಬೆನ್ನೂರು, ಮೇ 1 – ಭಾರತವನ್ನ ಅತ್ಯದ್ಭುತವಾಗಿ ಅಭಿವೃದ್ಧಿ ಪಡಿಸಿ ಜಗತ್ತಿನಲ್ಲಿಯೇ ಉನ್ನತ ಸ್ಥಾನಕ್ಕೆ ಕೊಂಡೊಯ್ಯ ಲಿರುವ ಪ್ರದಾನಿ ನರೇಂದ್ರ ಮೋದಿ ಅವರಿಗೆ ಬಸವರಾಜ ಬೊಮ್ಮಾಯಿ ಅವರ ಅವಶ್ಯಕತೆ ಇದೆ. ಅವರನ್ನ ದೆಹಲಿಗೆ ಕಳಿಸಿರಿ ಎಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ರಾಣೇ ಬೆನ್ನೂರು ಜನತೆಗೆ ಮನವಿ ಮಾಡಿದರು.
ಅವರು ಇಂದು ನಗರದಲ್ಲಿ ರೋಡ್ ಶೋ ನಡೆಸಿ ಗದಗ-ಹಾವೇರಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚಿಸಿದರು. ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಅವರೊಬ್ಬ ಜನಪ್ರೀಯ ಮುಖಂಡರಾಗಿದ್ದಾರೆ. ಅವರ ಸೇವೆ ದೇಶಕ್ಕೆ ಬೇಕಿದೆ ಕಾರಣ ಅವರನ್ನ ಲೋಕಸಭೆ ಸದಸ್ಯರನ್ನ ಮಾಡುತ್ತೀರಿ ಎನ್ನುವ ನಂಬುಗೆ ಮೋದಿ ಅವರದಾಗಿದೆ ಅವರಿಗೆ ಮತನೀಡಿರಿ ಎಂದು ಅಮಿತ್ ಶಾ ಹೇಳಿದರು.
ಕುರುಬಗೇರಿ ಕ್ರಾಸ್ ನಿಂದ ಪಕ್ಷದ ತೆರೆದ ವಾಹನದಲ್ಲಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಜಿಲ್ಲಾದ್ಯಕ್ಷ ಅರುಣ ಪೂಜಾರ, ಮಾಜಿ ಸಚಿವ ಬಿ.ಸಿ.ಪಾಟೀಲ, ತಾಲ್ಲೂಕ ಅದ್ಯಕ್ಷ ಪರಮೇಶ ಗೂಳಣ್ಣನವರ ಮತ್ತಿತರ ಮುಖಂಡರ ಜೊತೆ ರೋಡ್ ಶೋ ನಡೆಸಿದ ಅಮಿತ್ ಶಾ ಅಶೋಕ ಸರ್ಕಲ್ ನಲ್ಲಿ ನೆರೆದಿದ್ದ ಜನರಮ್ನ ಉದ್ಧೇಶಿಸಿ ಮಾತನಾಡಿದರು.ರಸ್ತೆ ಉದ್ದಕ್ಕೂ ಸಾವಿರಾರು ಜನರು ನೆರೆದಿದ್ದರು.