ದಾವಣಗೆರೆ,ಮೇ 1 – ದಾವಣಗೆರೆ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾರ್ಥಿಸಿ, ಅವರ ಅಭಿ ಮಾನಿಗಳು ತಮಿಳುನಾಡಿನ ತಿರುವಣ್ಣಾ ಮಲೈನ ಗಿರಿಮಲೈ ದೇವಸ್ಥಾನಕ್ಕೆ 14 ಕಿ.ಮೀ ಪಾದಯಾತ್ರೆ ನಡೆಸಿ ಅಭಿಮಾನ ಮೆರೆದಿದ್ದಾರೆ.
ನಗರದ ಆರೋಗ್ಯ ಸ್ವಾಮಿ, ಗೋಪಾಲ್ ಜಿ, ಚಂದ್ರು ಸಿ ಹಾಗೂ ಸಂಗಡಿಗರೇ ಈ ಪಾದಯಾತ್ರೆ ಮಾಡಿದವರಾಗಿದ್ದು, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಚುನಾವಣೆಯಲ್ಲಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ.