ಬಿಜೆಪಿಯಿಂದ ರೈತರಿಗೆ ಮಲತಾಯಿ ದೋರಣೆ : ಕರಡಿ ದುರ್ಗದ ಚೌಡಪ್ಪ

ಬಿಜೆಪಿಯಿಂದ ರೈತರಿಗೆ ಮಲತಾಯಿ ದೋರಣೆ : ಕರಡಿ ದುರ್ಗದ ಚೌಡಪ್ಪ

ಹರಪನಹಳ್ಳಿ, ಮೆ 1 – ವಚನೆ ಪಾಲನೆ ಮಾಡದೇ ರೈತರಿಗೆ ದ್ರೋಹ ಬಗೆದ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬುದ್ದಿ ಕಲಿಸೋಣ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕರಡಿ ದುರ್ಗದ ಚೌಡಪ್ಪ ಹೇಳಿದರು.

ತಾಲ್ಲೂಕಿನ ಕುಂಚೂರು ಗ್ರಾಮದಲ್ಲಿ ರೈತರಿಗೆ ಮಲತಾಯಿ ದೋರಣೆ ಅನುಸರಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎನ್ನುವ ಬಿತ್ತಿ ಚಿತ್ರ ಬಿಡಿಗಡೆಗೊಳಿಸಿ ಮಾತನಾಡಿದರು.

ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದ ರೈತ ವಿರೋಧಿ ಹಾಗೂ ರೈತ ಮುಕ್ತ ಭಾರತ ಮಾಡಲು ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಬೇಕು. ದೆಹಲಿಯ ಗಡಿಯಲ್ಲಿ ಚಳಿ, ಮಳೆ ಎನ್ನದೆ ಒಂದೂವರೆ ವರ್ಷ ಚಳವಳಿ ಮಾಡಿದ ಅವಧಿಯಲ್ಲಿ ಸುಮಾರು 750 ರೈತರು ಪ್ರಾಣ ಕಳೆದುಕೊಂಡಿದ್ದು ಇದಕ್ಕೆ ಪ್ರಮುಖ ಕಾರಣ ಮೋದಿ ನೇತೃತ್ವದ ಕೇಂದ್ರ ಸರ್ಕಾರ.

ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡದ ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

ಈ ವೇಳೆ  ರೈತ ಸಂಘದ ಗೌರವ ಅಧ್ಯಕ್ಷ ಮಾಲ್ದರ್ ಶಫಿವುಲ್ಲಾ. ರೈತ ಮುಖಂಡರಾದ ಎಸ್ ಮುನಾಪ್, ಹಡಗಲಿ ಇಬ್ರಾಹಿಂ. ಎಂ., ಕೋಟೆಪ್ಪ.ಹೆಚ್, ರಜಾವುಲ್ಲಾ, ಗೌಂಡಿ ಶೌಖತ್ ಆಲಿ, ಅಜ್ಜೋಳ್ ಭರ್ಮಪ್ಪ, ಅಜ್ಜೋಳ್ ದಿಳ್ಯಪ್ಪ ಸೇರಿದಂತೆ, ಇತರರು ಇದ್ದರು.

error: Content is protected !!