ದಾವಣಗೆರೆ, ಏ. 26 – ತಾಲ್ಲೂಕಿನ ಎಲೆಬೇತೂರು ಗ್ರಾಮ ಶ್ರೀ ಶಿವ ನಾರದಮುನಿ ಸೇವಾ ಸಮಿತಿಯಿಂದ ಹರಪನಹಳ್ಳಿ ತಾಲ್ಲೂಕು ಶ್ರೀಕ್ಷೇತ್ರ ಚಿಗಟೇರಿಯಲ್ಲಿ ನಡೆಯಲಿರುವ ಶ್ರೀ ಶಿವನಾರದಮುನಿ ರಥೋತ್ಸವದ ನಿಮಿತ್ತ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತರು ಎಲೆಬೇತೂರಿನ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿಗೆ ಪೂಜೆ ಸಲ್ಲಿಸಿ, 16ನೇ ವರ್ಷದ ಚಿಗಟೇರಿಗೆ ಪಾದಯಾತ್ರೆ ಕೈಗೊಂಡರು. ನಾಡಿದ್ದು ದಿನಾಂಕ 28ರ ಭಾನುವಾರ ಸಂಜೆ ಶ್ರೀ ಶಿವನಾರದಮುನಿ ರಥೋತ್ಸವ ಸಂಜೆ 5 ಗಂಟೆಗೆ ನಡೆಯಲಿದೆ.
January 10, 2025