ಮಲೇಬೆನ್ನೂರು, ಏ. 25- ಭಾನುವಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಬುಧವಾರ ಬೆಳಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರ ಮದಿಂದ ಜರುಗಿತು, ಗ್ರಾಮದ ಆರಾಧ್ಯ ದೈವ ಶ್ರೀ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಆಂಜನೇಯ, ಶ್ರೀ ಬೀರಲಿಂ ಗೇಶ್ವರ, ಚಂದ್ರಗುತ್ಯಮ್ಮ, ಕರಿಯಮ್ಮ, ಕೆರೆ ಚೌಡೇಶ್ವರಿ, ದುರ್ಗಮ್ಮ ದೇವರುಗಳು ತೆರಳಿ ಪೂಜೆ ಸಲ್ಲಿಸಿ ಬಂದ ಮೇಲೆ ಆಂಜನೇಯ ಸ್ವಾಮಿ ಮೂರ್ತಿಯನ್ನು ರಥದಲ್ಲಿ ಇಟ್ಟು ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಆರಂಭಗೊಂಡಿ ತ್ತು. ಸಂಜೆ ನಡೆದ ಆಂಜನೇಯ ಸ್ವಾಮಿಯ ಮುಳ್ಳೋತ್ಸವದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಹರಕೆ ಹೊತ್ತ ಜನರು ಮುಳ್ಳು ತುಳಿದರು.
January 10, 2025