ಪದವಿ ಜಾಗೃತಿ ಶಿಬಿರದಲ್ಲಿ ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ಪ್ರದೀಪ್ ಪಾಟೀಲ್
ದಾವಣಗೆರೆ, ಏ.23- ಪ್ರಸ್ತುತ ವೃತ್ತಿಪರ ಪದವಿಗಳಲ್ಲಿ ಕೃಷಿಗೆ ಸಂಬಂಧಿಸಿದ ಪದವಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದು ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ಪ್ರದೀಪ್ ಪಾಟೀಲ್ ಹೇಳಿದರು.
ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇತ್ತಿಚೇಗೆ ನಡೆದ ಕೃಷಿಗೆ ಸಂಬಂಧಿಸಿದ ಪದವಿ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಪದವಿ ಪಡೆದ ವ್ಯಕ್ತಿಗಳು ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದಲ್ಲಿ ಕೃಷಿಯ ಸಮಗ್ರ ಬೆಳೆವಣಿಗೆಗೆ ಇವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಎಂ.ಜಿ ಬಸವನಗೌಡ ಪ್ರಾಸ್ತಾವಿಕ ಮಾತನಾಡಿ, ಕೃಷಿ ಸಂಬಂಧಿಸಿದ ರಾಜ್ಯದ ಆರು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ರೈತರ ಮಕ್ಕಳಿಗೆ ಶೇ.50ರಷ್ಟು ಮೀಸಲಾತಿ ಇದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೈತರ ಮಕ್ಕಳಿಗೆ ಸಲಹೆ ನೀಡಿದರು.
ನಮ್ಮ ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 287ಕ್ಕೂ ಅಧಿಕ ವಿದ್ಯಾರ್ಥಿಗಳು ಪಶು ವೈದ್ಯ ಕೀಯ, ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ, ಮೀನುಗಾರಿಕೆ, ಗೃಹ ವಿಜ್ಞಾನ ಪದವಿ ಪಡೆದಿ ರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಿಭಾಗದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್ ಮಾತ ನಾಡಿ, ಆತ್ಮ ಸ್ಥೈರ್ಯ ಮತ್ತು ನಂಬಿ ಕೆಯಿಂದ ವಿದ್ಯಾಭ್ಯಾಸ ಮಾಡಿದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ತಿಳಿಸಿದರು.
ವಿಜ್ಞಾನಿಗಳಾದ ಜೆ. ರಘುರಾಜ, ಎಚ್. ಎಂ. ಸಣ್ಣಗೌಡ್ರ, ಡಾ.ಜಿ.ಕೆ. ಜಯದೇವಪ್ಪ, ಡಾ. ಸುಪ್ರಿಯಾ ಪಿ. ಪಾಟೀಲ್ ಹಾಗೂ ಸಿಬ್ಬಂದಿ ಇದ್ದರು.