ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಡಾ. ಪ್ರಭಾ ಮಲ್ಲಿಕಾರ್ಜುನ್
ನಾಡಿದ್ದು ಕಾಂಗ್ರೆಸ್ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ : ಎಸ್ಸೆಸ್ಸೆಂ
ದಾವಣಗೆರೆ, ಏ.15 – ದಾವಣಗೆ ರೆಯಲ್ಲಿ ಬಿಜೆಪಿ ಶಿಸ್ತಿನ ಪಕ್ಷ ಆಗಿ ಉಳಿದಿಲ್ಲ. ವೈಯಕ್ತಿಕ ಹಾಗೂ ದುಡ್ಡಿನ ಪಕ್ಷ ಆಗಿ ಮಾರ್ಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಎರಡನೇ ಸೆಟ್‌ನ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ನಿನ್ನೆ ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಎಲ್.ಡಿ. ಗೋಣೆಪ್ಪ, ಸೌಮ್ಯ ನರೇಂದ್ರ ಹಾಗೂ ಜಯಮ್ಮ ಗೋಪಿನಾಯ್ಕ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿರುವವರು ಆ ಪಕ್ಷದಿಂದ ಹಾಗೂ ಅಭ್ಯರ್ಥಿಯಿಂದ ಬೇಸತ್ತಿದ್ದಾರೆ. ಹೀಗಾಗಿ ಆ ಪಕ್ಷದಲ್ಲಿನ ಒಳ್ಳೆಯವರು ಕಾಂಗ್ರೆಸ್‌ಗೆ ಬರುತ್ತಿ ದ್ದಾರೆ. ಇನ್ನೂ ಹಲವರು ಕಾಂಗ್ರೆಸ್‌ಗೆ ಬರಲಿದ್ದಾರೆ. ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಚುನಾವಣಾ ವಾತಾವರಣ ಕಾಂಗ್ರಸ್ ಪರ ಒಳ್ಳೆಯ ವಾತಾವರಣ ಸೃಷ್ಟಿ ಆಗುತ್ತಿದೆ. ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಒಲವಿದೆ. ಎಲ್ಲ ವರ್ಗದವರು ಕಾಂಗ್ರೆಸ್ ಪರವಾಗಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ದಿನಾಂಕ 18ರ ಗುರುವಾರ ಕಾಂಗ್ರೆಸ್ ಪಕ್ಷದಿಂದ ಮೆರವಣಿಗೆ ಮೂಲಕ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪಾಲ್ಗೊಳ್ಳಲಿದ್ದಾರೆ. ಹಳೇಪೇಟೆ ದುರ್ಗಾಂಬಿಕ ದೇವಸ್ಥಾನ ಹಾಗೂ ನಿಟುವಳ್ಳಿ ದೇವಸ್ಥಾನ ಎರಡೂ ಕಡೆಗಳಿಂದ ಮೆರವಣಿಗೆ ಆರಂಭವಾಗಲಿದೆ. ಎರಡೂ ಮೆರವ ಣಿಗೆ ಪಿ.ಬಿ. ರಸ್ತೆಯಲ್ಲಿ ಸೇರಲಿವೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾ ಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್, ರೈತರು, ಯುವ ಕರು, ಮಹಿಳೆಯರು ಸೇರಿದಂತೆ ಎಲ್ಲರೂ ತಮ್ಮದೇ ಆದ ನಿರೀಕ್ಷೆ ಹೊಂದಿದ್ದಾರೆ. ಆ ನಿರೀಕ್ಷೆಗಳನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಗ್ಯಾರಂಟಿ ಯೋಜನೆಗಳು ತಮಗೆ ನೆರವಾಗ ಲಿವೆ. ಜಾತಿ ಧರ್ಮ ಭೇದವಿಲ್ಲದೇ ಜನರು ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಭಾ ಮಲ್ಲಿಕಾರ್ಜುನ್ ಅವರು ಸಚಿವ ಮಲ್ಲಿಕಾರ್ಜುನ್, ಮುಖಂಡರಾದ ಆರ್.ಎಸ್. ಶೇಖರಪ್ಪ, ಆರ್.ಹೆಚ್. ನಾಗಭೂಷಣ್, ಡಿ. ಬಸವರಾಜ್, ಎ.ನಾಗರಾಜ್, ಹನುಮಂತಪ್ಪ, ಅಯೂಬ್ ಪೈಲ್ವಾನ್ ಅವರೊಂದಿಗೆ ನಾಮಪತ್ರ ಸಲ್ಲಿಸಿದರು.