ನಾಳಿನ ಕಾರ್ಯಕ್ರಮಕ್ಕೆ ತರಳಬಾಳು ಶ್ರೀಗಳ ಸಾನ್ನಿಧ್ಯ
ನ್ಯಾಮತಿ, ಏ. 11- ತಾಲ್ಲೂಕಿನ ಚೀಲೂರು ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಈಶ್ವರ ದೇವಾಲಯದ ಪ್ರವೇಶೋತ್ಸವ, ಕಳಸಾರೋಹಣ, ಧರ್ಮಸಭೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಕೆಂಡದಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಾಳೆ ದಿನಾಂಕ 12 ರ ಶುಕ್ರವಾರದಿಂದ 17 ರವರೆಗೆ ಜರುಗಲಿವೆ ಎಂದು ಶಿವ ಬ್ಯಾಂಕ್ ಮಾಜಿ ಅಧ್ಯಕ್ಷ ಚೀಲೂರು ಮುಖಂಡರಾದ ಪಿ.ಜಿ. ವೀರಭದ್ರಪ್ಪಗೌಡ್ರು ಹೇಳಿದರು.
ಚೀಲೂರು ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಿನಾಂಕ 12 ರಂದು ಅಂಕುರಾರ್ಪಣೆ, ದಿನಾಂಕ 13 ರ ಶನಿವಾರ ಬೆಳಗಿನ ಜಾವ 3 ರಿಂದ 4.30 ರವರೆಗೆ ಸುಮಂಗಲಿಯರಿಂದ ಗಂಗೆ ಪೂಜೆ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಈಶ್ವರ ದೇವರ ದೇವಾಲಯಗಳ ಪ್ರವೇಶ, ಗಣಪತಿ ಪೂಜೆ, ಉಮಾಮಹೇಶ್ವರಿ ಸ್ವಸ್ತಿ ಪುಣ್ಯಾಹ ನಾಂದಿ ಸಮಾರಾಧನೆ ಗುರುಕಲಶ, ನವಗ್ರಹ ಅಷ್ಟದಿಕ್ಪಾಲಕರ, ಗ್ರಾಮಶಾಂತಿಗಾಗಿ ಹೋಮಗಳು ನಡೆಯುತ್ತವೆ.
ಬೆಳಿಗ್ಗೆ 8.45 ರಿಂದ 9 ರವರೆಗೆ ಸುಬ್ರಹ್ಮಣ್ಯ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುವುದು. ಮಧ್ಯಾಹ್ನ 1 ಕ್ಕೆ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಧರ್ಮಸಭೆ ನಡೆಯುತ್ತದೆ.
ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಸಾಧು ವೀರಶೈವ ಲಿಂಗಾಯತ ಸಮಾಜದ ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ ಕೋಡಿಕೊಪ್ಪ, ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಸಿ.ಗದಿಗೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ, ತಾ.ಪಂ. ಮಾಜಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಮಾಜಿ ಸದಸ್ಯ ಸಿ.ಎಲ್. ಸತೀಶ್, ಚೀಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ಚೀಲೂರು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ಕೆ.ಪಿ. ರವಿಕುಮಾರ್ ಗೌಡ್ರು, ಚೀಲೂರು ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಸಮಿತಿಯ ಯತೀಶ್ ಚಂದ್ರ ಕೋರಿ, ಮುಖಂಡರಾದ ಹೆಚ್. ಶಿವಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ಉಪನ್ಯಾಸಕ ಎಂ.ಎನ್. ವಿನಾಯಕ ಉಪನ್ಯಾಸ ನೀಡುವರು. ಚೀಲೂರು ಗ್ರಾಮದ ಜಿ. ಚಂದ್ರಶೇಖರ ಗೌಡ್ರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಿತಿಯ ಅಧ್ಯಕ್ಷ ಹೆಚ್. ಶಿವಪ್ಪ, ಧರ್ಮದರ್ಶಿಗಳಾದ ಜಿ. ಚಂದ್ರಶೇಖರ ಗೌಡ್ರು, ಕೆ.ಎಂ. ಗಣೇಶ್, ಕೆ.ಜಿ. ಚಂದ್ರಪ್ಪ, ಕೆ.ವಿ. ವೀರೇಶ್, ಬಿ.ಸಿ. ರಮೇಶ್, ಮುಖಂಡರಾದ ಸಿ.ಎಲ್. ವಿರೂಪಾಕ್ಷಪ್ಪ, ಜಿ. ಹಾಲೇಶಪ್ಪಗೌಡ್ರು, ಕೆ.ಜಿ. ಷಣ್ಮುಖಗೌಡ್ರು, ಕೆ.ಜಿ. ಗಿರೀಶ್, ಮಂಜಪ್ಪಗೌಡ್ರು, ತಾ.ಪಂ. ಮಾಜಿ ಸದಸ್ಯ ಸಿ.ಎಲ್. ಸತೀಶ್ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.