ನಗರಕ್ಕೆ ರಾಜ್ ಮೊಮ್ಮಗ ಯುವರಾಜ್

ನಗರಕ್ಕೆ ರಾಜ್ ಮೊಮ್ಮಗ ಯುವರಾಜ್

ದಾವಣಗೆರೆ, ಏ.3- ಮಾರ್ಚ್‌ 29ರಂದು ಬಿಡುಗಡೆಯಾದ `ಯುವ’ ಚಲನಚಿತ್ರದ ಅಂಗವಾಗಿ ಡಾ. ರಾಜ್‌ಕುಮಾರ್ ಅವರ ಮೊಮ್ಮಗ, ಯುವರಾಜ್ ಕುಮಾರ್ ಮತ್ತು ಚಿತ್ರತಂಡ ದವರು ಬುಧವಾರ ನಗರದ ಅಶೋಕ ಚಿತ್ರಮಂದಿರಕ್ಕೆ ಆಗಮಿಸಿದ್ದರು.

ಚಲನಚಿತ್ರ ನಾಯಕ ಯುವ ರನ್ನು ಸನ್ಮಾನಿಸುವ ಮೂಲಕ ಸ್ವಾಗತಿಸಿಕೊಂಡ ಅಭಿಮಾನಿಗಳು, ಅಪ್ಪು-ಅಪ್ಪು ಎಂಬ ಜಯಘೋಷವನ್ನು ಹಾಕುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಯುವರಾಜ್‌ರ ಜೊತೆ ಫೋಟೋ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಅಭಿಮಾನಿಗಳು ಮಗ್ನರಾಗಿದ್ದರು, ಇದೇ ವೇಳೆ ಅಭಿಮಾನಿಗಳಿಂದ ಹೆಚ್ಚಿನ ನೂಕುನುಗ್ಗಲು ಉಂಟಾಗಿತ್ತು.

error: Content is protected !!