ಮಕ್ಕಳಿಗೆ ಸಾಮಾಜಿಕ ಕಾಳಜಿ ಬಗ್ಗೆ ಅರಿವಿರಲಿ

ಮಕ್ಕಳಿಗೆ ಸಾಮಾಜಿಕ ಕಾಳಜಿ ಬಗ್ಗೆ ಅರಿವಿರಲಿ

ದಾವಣಗೆರೆ, ಏ.03- ಮಕ್ಕಳು ಕೇವಲ ಅಂಕಗಳಿಗೆ ಸೀಮಿತವಾಗದೆ, ನಾಡು-ನುಡಿ, ಇತಿಹಾಸ-ಪರಂಪರೆ ಮತ್ತು ಸಾಮಾಜಿಕ ಕಾಳಜಿ ಬಗ್ಗೆ ಗಮನ ಹರಿಸುವಂತೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ ಶೆಣೈ ಮಕ್ಕಳಿಗೆ ಸಲಹೆ ನೀಡಿದರು. ಸೋಮವಾರ ನಗರದ ಪಿ.ಜೆ. ಬಡಾವಣೆಯ ಬಾಪೂಜಿ ವಿದ್ಯಾ ಸಂಸ್ಥೆಯ ಬಯಲು ರಂಗ ಮಂದಿರದಲ್ಲಿ ನೇತಾಜಿ ಗ್ರೂಪ್, ಚೇತನ ಗೈಡ್ ಗ್ರೂಪ್ ವತಿಯಿಂದ ವಸಂತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಭರಾಟೆಯಿಂದಾಗಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಕೊರತೆ ಕಾಣುತ್ತಿದೆ. ಆದ್ದರಿಂದ ಮಕ್ಕಳು ಕ್ರಿಯಾಶೀಲತೆಯಿಂದ ವಿವಿಧ ಕೌಶಲ್ಯಗಳಿಗೆ ಹೆಚ್ಚು ಮನ್ನಣೆ ನೀಡಬೇಕು ಎಂದರು.

ರಾಜಧಾನಿ ಆಗಬೇಕಿದ್ದ ದಾವಣಗೆೆರೆ, ರಾಜಕೀಯ ಜಂಜಾಟದಿಂದ ಜಿಲ್ಲೆಯು ಅವಕಾಶ ವಂಚಿತವಾಗಿದೆ. ವಿಶ್ವವಿಖ್ಯಾತ ಬಸವ ಜಯಂತಿ ಪ್ರಾರಂಭವಾಗಿದ್ದೇ ಬೆಣ್ಣೆನಗರಿಯಿಂದ ಎಂದು ತಿಳಿಸಿದರು. ಸೋಮೇಶ್ವರ ಎಸ್. ಶೆಟ್ಟರ್ ಸ್ವಾಗತಿಸಿದರು. ಜೆ.ಎಸ್. ವಿಜಯ್ ಪ್ರಾಸ್ತಾವಿಕ ಮಾತನಾಡಿದರು. ತೇಜಸ್ವಿನಿ ಸುರ್ವೆ ಪರಿಚಯಿಸಿದರು, ದಿವ್ಯಶ್ರೀ ಎಸ್.ಶೆಟ್ಟರ್ ನಿರೂಪಿಸಿದರು, ಸೌಮ್ಯ ಆನಂದ್ ವಂದಿಸಿದರು.

error: Content is protected !!