ಪ್ರಧಾನಿಯಿಂದ ರಾಷ್ಟ್ರಪತಿಗೆ ಅವಮಾನ

ಪ್ರಧಾನಿಯಿಂದ ರಾಷ್ಟ್ರಪತಿಗೆ ಅವಮಾನ

ದಾವಣಗೆರೆ, ಏ. 2 – ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾನಿಯವರಿಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ರವರು ನಿಂತುಕೊಂಡು ಭಾರತ ರತ್ನ ಪ್ರಶಸ್ತಿ ನೀಡುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೌಜನ್ಯ ದಿಂದ ಎದ್ದು ನಿಲ್ಲಬೇಕಾಗಿತ್ತು. ಆದರೆ ಕುಳಿತುಕೊಂಡು ಅಗೌರವ ತೋರಿರು ವುದನ್ನು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಪ್ರಧಾನಿ ನಡೆಯನ್ನು ಖಂಡಿಸಿದ್ದಾರೆ.  ಸಂವಿಧಾನಾತ್ಮಕವಾಗಿ ಪ್ರಧಾನಿಗಿಂತಲೂ ಉನ್ನತ ಸ್ಥಾನದಲ್ಲಿರುವ ಬುಡಕಟ್ಟು ವರ್ಗಕ್ಕೆ ಸೇರಿದ ರಾಷ್ಟ್ರಪತಿಗಳನ್ನು ಕೇವಲವಾಗಿ ನೋಡುವುದು ಮೋದಿಯ ಮನಸ್ಥಿತಿಯಾಗಿದೆ ಎಂದು ಬಸವರಾಜ್ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

error: Content is protected !!