ಹರಿಹರದಲ್ಲಿ ರೈತರಿಂದ ತಹಶೀಲ್ದಾರ್‌ಗೆ
ಹರಿಹರ, ಏ.1- ತಾಲ್ಲೂಕಿನ ರೈತರು ಬೆಳೆಯುವ ಬೆಳೆಗಳಿಗೆ, ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ತಾಲ್ಲೂಕು ರೈತ ಸಂಘದ ವತಿಯಿಂದ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ತಾಲ್ಲೂಕಿನ ರೈತರ ಸಮಸ್ಯೆಗಳ ಬಗ್ಗೆ ನಮಗೂ ಸಂಪೂರ್ಣ ಅರಿವಿದೆ. ನಾವು ಕೂಡ ರೈತರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅದರಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹ ತಮಗೆ ವಹಿಸಿರುವ ಕೆಲಸವನ್ನು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳಿಗೆ ಅಧಿಕಾರಿಗಳು ಹೊಣೆ ಆಗಲಿಕ್ಕೆ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಎಲ್ಲರೂ ತಾಳ್ಮೆಯಿಂದ ಹೋದಾಗ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳು ಇರುತ್ತದೆ ಎಂದು ಹೇಳಿದರು.
ರೈತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಲಿಕ್ಕೆ ಸಿದ್ದವಿದೆ. ಈಗಾಗಲೇ ನೀರಾವರಿ ಇಲಾಖೆಯ ಅಧಿಕಾರಿಗಳ ಬಳಿ ಚರ್ಚೆ ಮಾಡಿದ್ದು, ಅವರು ಕೂಡ ರೈತರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಎಲ್ಲಾ ಬಗೆಯ ಸಹಕಾರ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು.
ರೈತ ಸಂಘದ ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ತಾಲ್ಲೂಕಿನ ರೈತರು ಬೆಳೆದಂತ ಬೆಳೆಗಳಿಗೆ 14 ರಿಂದ 17 ರವರಿಗೆ ಡೆಡ್ ಥೈಲ್ಯಾಂಡ್ ಗೆ ನೀರಿನ ವ್ಯವಸ್ಥೆ ಮಾಡುವಂತೆ ತಹಶಿಲ್ದಾರ್ ಗಮನಕ್ಕೆ ತರಲಾಯಿತು. ತಹಶಿಲ್ದಾರ್ ರವರು ಕೂಡ ನೀರಾವರಿ ಇಲಾಖೆಯ ಅಧಿಕಾರಿಗಳ ಬಳಿ ದೂರವಾಣಿ ಸಂಪರ್ಕ ಮಾಡಿ ಮಾತನಾಡಿದರು.
ನೀರಾವರಿ ಇಲಾಖೆಯ ಅಧಿಕಾರಿಗಳು ಡಿಪ್ರೇಷನ್ ಮೇಲೆ ಕರ್ತವ್ಯವನ್ನು ನಿರ್ವಹಿಸುತ್ತಿರುವುದರಿಂದ ತಮ್ಮ ಮೇಲೆ ಯಾವುದೇ ರೀತಿಯ ಹೆಚ್ಚಿನ ಜವಾಬ್ದಾರಿ ಹಾಕಿಕೊಳ್ಳಲು ಮುಂದಾಗದೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ದೂರಿದರು.
ಕುಮಾರನಳ್ಳಿ ಕೆರೆಯಲ್ಲಿ ಕೇವಲ 2.5 ಅಡಿ ಅಷ್ಟು ನೀರು ಇರೋದರಿಂದ ಜನ ಜಾನುವಾರುಗಳ ಸಮಸ್ಯೆ ಹೇಳತೀರದಾಗಿದೆ. ಇನ್ನೂ ಬೊರವೇಲ್ ಕೂಡ ರೀ ಜನರೇಟ್ ಆಗುತ್ತಿಲ್ಲ. ಇಂತಹ ರೈತರ ಸಮಸ್ಯೆಗಳು ಅನೇಕ ಇದ್ದು ಜೊತೆಗೆ ಹರಿಹರ ತಾಲ್ಲೂಕು ಬರ ಪ್ರದೇಶ ಎಂದು ಘೋಷಣೆ ಆಗಿದೆ. ಇದುವರೆಗೂ ರೈತರ ಖಾತೆಗೆ ಒಂದು ರೂ. ಹಣ ಜಮ ಆಗಿರುವುದಿಲ್ಲ. ಸರ್ಕಾರ ನಮ್ಮ ಜಿಲ್ಲೆಯ ರೈತರಿಗೆ 13 ಕೋಟೆ ಬಂದಿದೆ ಎಂದು ಹೇಳಿಕೊಂಡು ಹೊರಟಿದೆ ಆದರೆ ರೈತರ ಖಾತೆ ನೋಡಿದರೆ ಕಾಲಿ ಇಂತಹ ಪರಿಸ್ಥಿತಿ ಇರುತ್ತದೆ.
ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿಗಳು ರೈತರ ಮನೆ ಬಾಗಿಲು ಬಳಿ ಬಂದು ವಸೂಲಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದರಿಂದ ನಿತ್ಯ ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಮಯ ದಲ್ಲಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ಮರುಪಾವತಿ ಮಾಡುವುದಕ್ಕೆ ಸಮಯವನ್ನು ಕೊಡುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎನ್. ಸ್ವಾಮಿ, ಹನಗ ವಾಡಿ ರುದ್ರುಮುನಿ, ಶಂಭಣ್ಣ, ಬಸವರಾಜ್ ಹಲಸಬಾಳು, ಕೆಂಚನಹಳ್ಳಿಗೌಡ್ರು, ಜಿಗಳಿ ಮಹಾಂ ತೇಶ್ ಹನಗವಾಡಿ ರೇವಣಪ್ಪ, ನಂದಿತಾವರೆ ರವಿರಾಜ್, ಇತರರು ಹಾಜರಿದ್ದರು.