ಮಲೇಬೆನ್ನೂರು, ಮಾ.25- ಪರಸ್ಪರ ಬಣ್ಣ ಹಾಕುವ ಹೋಳಿ ಹಬ್ಬವನ್ನು ಜಿಗಳಿ, ಕುಂಬಳೂರು, ಜಿ.ಬೇವಿನಹಳ್ಳಿ, ಯಲವಟ್ಟಿ, ಸಿರಿಗೆರೆ, ಕೆ.ಎನ್.ಹಳ್ಳಿ, ಕೊಕ್ಕನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯುವಕರು, ಯುವತಿಯರು, ಮಕ್ಕಳು ಸೋಮವಾರ ಸಂಭ್ರಮದಿಂದ ಆಚರಿಸಿದರು. ಡಿಜೆ ಸಂಗೀತಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ನಂತರ ಭದ್ರಾ ಕಾಲುವೆಗಳಿಗೆ ತೆರಳಿ ಈಜಾಡಿ ಬೇಸಿಗೆ ದಾಹ ನೀಗಿಸಿಕೊಂಡರು. ಮಲೇಬೆನ್ನೂರು ಪಟ್ಟಣದಲ್ಲಿ ಕಳೆದ ವಾರ ಅಮ್ಮನ ಹಬ್ಬ ಜರುಗಿದ ಕಾರಣ ಹೋಳಿ ಹಬ್ಬದ ಆಚರಣೆ ಇರಲಿಲ್ಲ.
ಮಲೇಬೆನ್ನೂರಿನಲ್ಲಿ ಹೋಳಿ ಸಂಭ್ರಮ
![18 mbr holi 31.01.2024 ಮಲೇಬೆನ್ನೂರಿನಲ್ಲಿ ಹೋಳಿ ಸಂಭ್ರಮ](https://janathavani.com/wp-content/uploads/2024/03/18-mbr-holi-31.01.2024.jpg)