ಬೆಳೆ ಸಂರಕ್ಷಣೆಗೆ ಪ್ರಕೃತಿಯಲ್ಲಿಯೇ ಪರಿಹಾರವಿದೆ

ಬೆಳೆ ಸಂರಕ್ಷಣೆಗೆ ಪ್ರಕೃತಿಯಲ್ಲಿಯೇ ಪರಿಹಾರವಿದೆ

ಅತ್ತಿಗೆರೆಯಲ್ಲಿನ ಕ್ಷೇತ್ರೋತ್ಸವದಲ್ಲಿ ಡಾ.ಕೆ.ಆರ್. ಹುಲ್ಲುನಾಚೇಗೌಡ

ದಾವಣಗೆರೆ, ಮಾ.24- ತೋಟಗಾರಿಕೆ ಬೆಳೆ ಉತ್ಕೃಷ್ಟವಾಗಿ ಬೆಳೆಯಲು ಪ್ರಕೃತಿಯ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಡಾ.ಕೆ.ಆರ್. ಹುಲ್ಲುನಾಚೇಗೌಡ ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಮೈಕ್ರೋಬಿ ಫೌಂಡೇಶನ್, ನಾರದಮುನಿ ಕೃಷಿ ಮಾಹಿತಿ ಕೇಂದ್ರ, ಅತ್ತಿಗೆರೆ ಗ್ರಾಮಸ್ಥರ ಸಹಯೋಗದಲ್ಲಿ ಪೂಜಾರ್ ಬಸವರಾಜಪ್ಪನವರ ತೋಟದಲ್ಲಿ ಇತ್ತೀಚೆಗೆ  ನಡೆದ `ಕ್ಷೇತ್ರೋತ್ಸವ ಹಾಗೂ ಅನ್ನದಾತರಿಗೆ ಸನ್ಮಾನ’ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.

ರೈತ ಬೆಳೆಯುವ ಫಸಲಿಗೆ ಸೂಯ೯ನ ಶಾಖ, ನೀರಿನ ಮಿತ ಬಳಕೆ, ಎರೆಹುಳು ಅಭಿವೃದ್ಧಿ, ಜೇನುನೊಣ  ಸಂರಕ್ಷಣೆ, ಜೇಡರಬಲೆ, ಹಕ್ಕಿ-ಪಕ್ಷಿಗಳ ಬರುವಿಕೆ, ಉತ್ತರ-ದಕ್ಷಿಣಾಭಿಮುಖವಾಗಿ ಬೀಸುವ ಗಾಳಿ, ತ್ಯಾಜ್ಯಗಳ ನಿವ೯ಹಣೆ, ತ್ಯಾಜ್ಯಗಳ ಕಳಿಯುವಿಕೆ ಇವೆಲ್ಲದರ ಪ್ರಕ್ರಿಯೆ ಮುಖ್ಯವಾಗಿದೆ ಎಂದು ಹೇಳಿದರು.

ಇಂದು ಕೃಷಿ ಕ್ಷೇತ್ರದಲ್ಲಿ ತುಂಬಾ ಸವಾಲುಗಳಿದ್ದರೂ ಹಲವು ಸಂಸ್ಥೆಗಳ ಸಹಕಾರದಿಂದ ನಿಮ್ಮ ಬದುಕು ಹಸನಾಗುತ್ತೆ  ಎಂದು ಕೃಷಿ ಇಲಾಖೆಯ ಉಪ ನಿದೇ೯ಶಕ ಅಶೋಕ್ ಕುಮಾರ್ ತಿಳಿಸಿದರು.

ಸನ್ಮಾನಿತರು ಕೃಷಿ ಕುರಿತಂತೆ ತಮ್ಮ ಅನಿಸಿಕೆ ವಿನಿಮಯ ಮಾಡಿದರು.

ಹಿರಿಯ ಪತ್ರಕರ್ತರಾದ ನಾಗರಾಜ್ ಎಸ್. ಬಡದಾಳ್, ಸಿದ್ದಯ್ಯ ಹಿರೇಮಠ, ಕುಲಸಚಿವ ಡಾ. ಎನ್.ಕೆ. ಗೌಡರ್, ತೋಟಗಾರಿಕೆ ಇಲಾಖೆಯ ಅರುಣ್ ರಾಜ್, ದಿದ್ದಿಗೆ ಮಹಾದೇವಪ್ಪ, ವಿಶ್ವನಾಥ್, ಹರ್ಷ, ಹರೀಶ್, ವಿಜಯಕುಮಾರ್, ಮೈಕ್ರೋಬಿ ಸಂಸ್ಥೆಯ ಪದಾಧಿಕಾರಿಗಳು, ಕೃಷಿಕರು ಇದ್ದರು.

error: Content is protected !!